ಈಜಲು ತೆರಳಿದ್ದ ವ್ಯಕ್ತಿಯ ಶವ ಪತ್ತೆ
Update: 2017-09-14 21:18 IST
ಚಿಕ್ಕಮಗಳೂರು, ಸೆ.14: ಸ್ನೇಹಿತರೊಂದಿಗೆ ಕಳೆದ ಮಂಗಳವಾರ ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ.
ಕೊಪ್ಪ ತಾಲೂಕಿನ ನಟರಾಜ್(40) ಶವವಾಗಿ ಪತ್ತೆಯಾದ ವ್ಯಕ್ತಿಯಾಗಿದ್ದು, ಶವ ಕೊಪ್ಪ ತಾಲೂಕಿನ ಕಾರಂಗಿ ಬಳಿ ತುಂಗಾ ನದಿಯಲ್ಲಿ ಪತ್ತೆಯಾಗಿದೆ.
ನಟರಾಜ್ ಅವರು ಮಂಗಳವಾರ ತನ್ನ ಸ್ನೇಹಿತರ ಜತೆ ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಗುಂಡಿಯ ಅರಿವಿಲ್ಲದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತರ ದೇಹ ಪತ್ತೆಗಾಗಿ ತೀವ್ರ ಶೊಧ ಕಾರ್ಯ ಮುಂದುವರೆದಿತ್ತು. ಇಂದು ಮೃತ ದೇಹ ತುಂಗಾ ನದಿಯಲ್ಲಿ ಶವ ನದಿಯಲ್ಲಿ ಮೇಲೆದ್ದು ತಲುತ್ತಿರುವುದನ್ನು ಸ್ಥಳೀಯರು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಈ ಕುರಿತು ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.