×
Ad

ಪದವಿ ಪೂರ್ವ ವ್ಯಾಸಂಗದ ಶಿಕ್ಷಣ ಮಾಧ್ಯಮದ ಆದೇಶ ಹಿಂತೆಗೆಯಲು ಆಗ್ರಹಿಸಿ ಧರಣಿ

Update: 2017-09-14 22:00 IST

ಬಾಗೇಪಲ್ಲಿ, ಸೆ.14: ಪದವಿ ಪೂರ್ವ ವ್ಯಾಸಂಗದ ಶಿಕ್ಷಣ ಮಾಧ್ಯಮದ ಆದೇಶ ಮಾರ್ಪಾಟು ಮಾಡಲು ಆಗ್ರಹಿಸಿ ಎಸ್‍ ಎಫ್‍ಐ ಆಶ್ರಯದಲ್ಲಿ ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಈ ವೇಳೆ ತಾಲೂಕು ಎಸ್‍ಎಫ್‍ ಐಯ ಸಂಚಾಲಕ ಸೋಮಶೇಖರ್ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯು ಪದವಿ ಪೂರ್ವ ವ್ಯಾಸಂಗದಲ್ಲಿ ಶಿಕ್ಷಣ ಮಾಧ್ಯಮ ಕುರಿತು ಈಚೆಗೆ ಆದೇಶವನ್ನು ಜಾರಿ ಮಾಡಿದೆ. ಇದರ ಪ್ರಕಾರ ವಿದ್ಯಾರ್ಥಿಯು ಆಯ್ಕೆ ಮಾಡಿಕೊಂಡ ಮಾಧ್ಯಮದಲ್ಲಿಯೇ ಪರೀಕ್ಷೆ ಬರೆಯಬೇಕು ಜತೆಗೆ ಪ್ರಶ್ನಪತ್ರಿಕೆ ದ್ವೀಭಾಷೆಯಲ್ಲಿ ಮುದ್ರಿತವಾಗುವುದಿಲ್ಲವೆಂದು ಸೂಚಿಸಿದೆ ಇದರಿಂದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಕಠಿಣವಾಗಲಿದೆ ಎಂದು ಹೇಳಿದರು.

ಇಲಾಖೆಯು ನಡೆಸುವ ಸಾರ್ವತ್ರಿಕ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಷಾ ವಿಷಯಗಳನ್ನು ಹೊರತುಪಡಿಸಿ ಪ್ರವೇಶಾತಿ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡ ಮಾಧ್ಯಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸತಕ್ಕದ್ದು ಎಂದು ಕರ್ನಾಟಕ ಸರ್ಕಾರ ಶೈಕ್ಷಣಿಕ ಮಧ್ಯಾಂತರದಲ್ಲಿ ಆದೇಶ ಹೊರಡಿಸಿರುವುದು ಖಂಡನೀಯ ಎಂದರು.

ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅವೈಜ್ಞಾನಿಕ ನೀತಿಗಳನ್ನು ಅನುಸರಿಸುವುದನ್ನು ಕೈಬಿಡಬೇಕು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ನುರಿತ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಸುಧಾರಣೆತರಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯು ನಿಗದಿಪಡಿಸಿರುವ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಪದವಿ ಪೂರ್ವ ಕಾಲೇಜುಗಳು ಸಾಮಾನ್ಯವಾಗಿ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಭೋಧನೆಯನ್ನು ನೀಡುತ್ತಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಈಗ ಇಲಾಖೆಯು ಶೈಕ್ಷಣಿಕ ಮಧ್ಯಾಂತರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯ ಬೇಕೆಂದು ಮಾನ್ಯ ಶಿಕ್ಷಣ ಸಚಿವರಿಗೆ ಎಬಿವಿಪಿ ಆಗ್ರಹಿಸುತ್ತಿದ್ದು, ಇದನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಉದ್ಯಾನವನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಶೈಕ್ಷಣಿಕ ವರ್ಷದ ಮಧ್ಯಾಂತರ ಅವಧಿಯಲ್ಲಿ ಇಲಾಖೆ ವತಿಯಿಂದ ಇಂಥಹ ಆದೇಶ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಇಡೀ ರಾಜ್ಯದಲ್ಲಿಯೇ ವಾಣಿಜ್ಯ ವಿಭಾಗದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಲೆಕ್ಕಶಾಸ್ತ್ರ (ಅಕೌಂಟ್ಸ್), ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್) ವಿಷಯಗಳನ್ನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಕಠಿಣವಾಗಿದೆ ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ರಮೇಶ್ ಹಾಗೂ ಮುಖಂಡರಾದ ಗಣೇಶ್, ಮೋಹನ್ಬಾ ಬು,ವಿ.ಆಂಜಿ, ವಿನೋಧ ಕುಮಾರ್,ವಿ.ವೆಂಕಟೇಶ್,ವಿಶ್ವ,ಕಿರಣ್ ಕುಮಾರ್,ಹರೀಶ್,ಸುದರ್ಶನ್ ಶ್ವೇತ, ಸುರೇಖ,ಸ್ವಾತಿ, ಸೌಮ್ಯ  ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News