×
Ad

ಜಿಲ್ಲಾಸ್ಪತ್ರೆ ಅವರಣದ ಗಂಧದ ಮರ ಕಳವು

Update: 2017-09-14 22:58 IST

ಮಂಡ್ಯ, ಸೆ.14: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗಂಧದ ಮರವೊಂದನ್ನು ಕಳವು ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. 

ಆವರಣದಲ್ಲಿ ಮೂರು ಮರಗಳಿದ್ದು, ಆ  ಪೈಕಿ ಒಂದನ್ನು ಕಡಿದು ರೆಂಬೆಗಳನ್ನು ಬಿಟ್ಟು ಕಾಂಡವನ್ನು ದುಷ್ಕರ್ಮಿಗಳು ಕೊಂಡೊಯ್ದಿದ್ದಾರೆ.
ನಾಲ್ಕು ಕಡೆ ವಾರ್ಡ್ ಇದ್ದು, ಭದ್ರತಾ ಸಿಬ್ಬಂದಿ ನಿಯೋಜಿಸಿದ್ದರೂ, ಗಂಧದ ಮರವನ್ನು ಕಡಿದು ಸಾಗಿಸಲಾಗಿದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಯಾವುದೇ ದೂರು ನೀಡದಿರುವುದು ಅನುಮಾನಕ್ಕೆಡೆ ಮಾಡಿದೆ.

ಮರ ಕಡಿದಿರುವ ಚಿತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News