×
Ad

ಖಾಸಗಿ ಆಸ್ಪತ್ರೆಯಲ್ಲಿ ಮಗು ಸಾವು: ವೈದ್ಯರ ನಿರ್ಲಕ್ಷ್ಯ; ಆರೋಪ

Update: 2017-09-14 23:58 IST

ಮಾಲೂರು, ಸೆ.14: ವೈದ್ಯರ ನಿರ್ಲಕ್ಷ್ಯದಿಂದಾಗಿ ಜ್ವರದಿಂದ ಬಳಲುತ್ತಿದ್ದ ತಮ್ಮ ಸಾವನ್ನಪ್ಪಿದೆ ಎಂದು ಪಟ್ಟಣದ ಮಾರುತಿ ಬಡಾವಣೆಯ ದಂಪತಿ ಜಗದೀಶ್-ಸುಪ್ರಿಯಾ ಎಂಬವರು ಆರೋಪಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

ಈ ದಂಪತಿ ಬುಧವಾರ ರಾತ್ರಿ ತೀವ್ರ ಜ್ವರದಿಂದ ಬಳಲುತ್ತಿದ್ದ ತಮ್ಮ ಮಗ ದೀಕ್ಷಿತ್‌ನನ್ನು ಪಟ್ಟಣದ ಡಾ.ರಮೇಶ್ ಎಂಬವರ ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಡಾ.ರಮೇಶ್ ಅನುಪಸ್ಥಿತಿಯಲ್ಲಿ ಕರ್ತವ್ಯ ನಿರತ ಡಾ.ಸಂದೀಪ್ ಎಂಬವರು ದೀಕ್ಷಿತ್‌ಗೆ ಚಿಕಿತ್ಸೆ ನೀಡಿದ್ದು, ಗುರುವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಮಗುವಿಗೆ 105 ಡಿಗ್ರಿ ಯಷ್ಟು ಜ್ವರವಿದ್ದು, ಐಸಿಯು ಇಲ್ಲದ ಕಾರಣ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ವೈದ್ಯ ಸಂದೀಪ್ ಹೇಳಿ ಆ್ಯಂಬುಲೆನ್ಸ್ ಮೂಲಕ ಕಳುಹಿಸಿದ್ದರು. ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ವೈದ್ಯರು ಮಗು ನಿಧನವಾಗಿರುವುದನ್ನು ಸ್ಪಷ್ಟಪಡಿಸಿದ್ದರೆಂದು ತಿಳಿದು ಬಂದಿದೆ.

ಬಳಿಕ ಮಗುವಿನ ಮೃತ ದೇಹವನ್ನು ರಮೇಶ್‌ರವರ ಆಸ್ಪತ್ರೆಗೆ ತಂದ ಪೋಷಕರು ಮಗುವಿನ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕುಟುಂಬದವ ಆಕ್ರಂದನ ಮುಗಿಲುಮಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News