ಮಥುರಾ ಸಮೀಪದ ಶ್ರೀಜಿ ದೇವಳದಲ್ಲಿ ಸಾಧ್ವಿಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2017-09-15 10:47 GMT

ಮಥುರಾ,ಸೆ.15: ಇಲ್ಲಿಗೆ ಸಮೀಪದ ಬರ್ಸಾನಾದಲ್ಲಿಯ ದೇವಸ್ಥಾನಗಳ ಸಂಕೀರ್ಣವೊಂದರಲ್ಲಿ 45ರ ಹರೆಯದ ಸಾಧ್ವಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸೆ.11ರಂದು ತಡರಾತ್ರಿ ಶ್ರೀಜಿ ದೇವಸ್ಥಾನದಲ್ಲಿ ಈ ಹೇಯ ಘಟನೆ ಸಂಭವಿಸಿದೆ.

ಸಾಧ್ವಿ ದೇವಸ್ಥಾನದ ಬಾಲ್ಕನಿಯಲ್ಲಿ ಮಲಗಿದ್ದು, ಕಾವಲುಗಾರ ಮತ್ತು ದೇವಳದ ಇನ್ನೋರ್ವ ಸಿಬ್ಬಂದಿ ಆಕೆಯನ್ನು ಬಲಾತ್ಕಾರದಿಂದ ಪ್ರತ್ಯೇಕ ಸ್ಥಳಕ್ಕೊಯ್ದು ಆಕೆಯ ಮೇಲೆ ಅತ್ಯಾಚಾರವೆಗಿದ್ದಾರೆ ಎಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಮತ್ತು ಆರೋಪಿಗಳ ಬಂಧನಕ್ಕಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ (ಗ್ರಾಮೀಣ) ಆದಿತ್ಯಕುಮಾರ ಶುಕ್ಲಾ ತಿಳಿಸಿದರು.

ಘಟನೆಯಿಂದ ಆಘಾತಕ್ಕೊಳಗಾಗಿದ್ದ ಸಾಧ್ವಿ ಆರಂಭದಲ್ಲಿ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಸೆ.13ರಂದು ಸಂಜೆ ತಾನು ಪೊಲೀಸರ ಮೊರೆ ಹೋಗಿದ್ದೆ, ಅದೇಕೋ ಗೊತ್ತಿಲ್ಲ...ಅವರು ತನ್ನ ದೂರನ್ನು ದಾಖಲಿಸಿಕೊಂಡಿರಲಿಲ್ಲ ಎಂದು ಆಕೆ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ಸುದ್ದಿ ಕ್ರಮೇಣ ಹರಡತೊಡಗಿದಾಗ ಎಸ್‌ಎಸ್‌ಪಿ ಸ್ವಪ್ನಿಲ್ ಮಮ್ಗಾಯಿ ಅವರ ಮಧ್ಯಪ್ರವೇಶದ ಬಳಿಕ ಕೊನೆಗೂ ಸೆ.14ರಂದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News