×
Ad

ಚಿಕ್ಕಮಗಳೂರು: ಸರಕು, ಸೇವಾ ತೆರಿಗೆ ಕುರಿತು ವಿಚಾರ ಸಂಕಿರಣ

Update: 2017-09-15 19:38 IST

ಚಿಕ್ಕಮಗಳೂರು, ಸೆ.15: ನಗರದ ಸರ್ಕಾರಿ ಐಡಿಎಸ್‍ಜಿ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸೌಹಾರ್ದ ಪರಿಷತ್ ವತಿಯಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿಷಯವಾಗಿ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.

ನಗರ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ದಯಾನಂದ ಹಾಗೂ ಶ್ರೀಮತಿ ಪೂರ್ಣಿಮಾ ತೆರಿಗೆ ಬಗ್ಗೆ ಮಾಹಿತಿ ನೀಡಿ ಹಾಗೂ ಭಾಗವಹಿಸಿದ್ದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕೇಳಿದ ಕೆಲವು ಪ್ರಶ್ನಿಗಳಿಗೆ ಉಪಯುಕ್ತವಾದ ಮಾಹಿತಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಬಸವರಾಜು ವಹಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಬಿ.ಹೆಚ್.ನರೇಂದ್ರ ಪೈ, ಕಾಲೇಜು ಹಿರಿಯ ವಿದ್ಯಾರ್ಥಿಗಳ ಸ್ನೇಹ ಸೌಹಾರ್ದ ಪರಿಷತ್ ಅಧ್ಯಕ್ಷ ಬಿ.ಆರ್.ಹೊನ್ನಶೆಟ್ಟಿ, ಖಜಾಂಚಿ ಎಂ.ಸಿ.ರಾಮಸ್ವಾಮಿ, ವಾಣಿಜ್ಯ ತೆರಿಗೆ ಇಲಾಖೆ ಸಿಟಿಒ ಕೇಶವಮೂರ್ತಿ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಪರಿಷತ್ತಿನ ಕಾರ್ಯದರ್ಶಿ ಬಿ.ಸಿ.ಜಯರಾಮ್ ನಿರೂಪಿಸಿದರು. ಕಾಲೇಜಿನ ಮುಖ್ಯಸ್ಥೆ ಶ್ರೀಮತಿ ಕೆ.ಕಲಾವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News