2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ
ಚಾಮರಾಜನಗರ, ಸೆ.15: ನಗರದ ಶಂಕರಪುರ ಬಡಾವಣೆಯಲ್ಲಿರುವ ರಸ್ತೆಯೊಂದಕ್ಕೆ ನಗರೋತ್ಥಾನದ ಅನುದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪಿಕಾರ್ಡೊ ಆಸ್ಪತ್ರೆ ಮುಂಭಾಗದಿಂದ ಚನ್ನೀಪುರ ಮೋಳೆ ಸರ್ಕಾರಿ ಶಾಲೆಗೆ ಸಂಪರ್ಕಕಲ್ಪಿಸುವ ರಸ್ತೆ ಡಾಂಬರೀಕರಣ ಹಾಗೂ ಚರಂಡಿಯನ್ನು ಚರಂಡಿ ನಿರ್ಮಾಣ ಮಾಡಲು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಈ ರಸ್ತೆಯು ಒಳಚರಂಡಿ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟಿತ್ತು ಈ ಕಾಮಗಾರಿಯು ಅತೀ ಶೀಘ್ರದಲ್ಲೇ ನಡೆದು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗುವುದೆಂದು ತಿಳಿಸಿದರು.
ಇನ್ನು ಮೂರು ನಾಲ್ಕು ತಿಂಗಳೊಳಗಾಗಿ ನಗರಸಭೆ ವ್ಯಾಪ್ತಿಗೆ ಬರುವ 31 ವಾರ್ಡುಗಳ ರಸ್ತೆಗಳನ್ನು ಪೂರ್ಣಗೊಳಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಚೂಡಾ ಅಧ್ಯಕ್ಷ ಸುಹೈಲ್ ಅಲಿಖಾನ್, ನಗರಸಭಾ ಪ್ರಭಾರ ಅಧ್ಯಕ್ಷ ರಾಜಪ್ಪ, ಸದಸ್ಯರಾದ ಚಿನ್ನಸ್ವಾಮಿ, ಲೋಕೇಶ್, ಮಹೇಶ್ ಉಪ್ಪಾರ್, ಬಂಗಾರು, ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಜ್ಗರ್ ಮುನ್ನಾ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಶ್ರೀನಿವಾಸ್ ಪ್ರಸಾದ್, ಪೌರಾಯುಕ್ತ ರಾಜಣ್ಣ, ಎಇಇ ಸತ್ಯಮೂರ್ತಿ, ಗುತ್ತಿಗೆದಾರ ಯೋಗಾನಂದ ಸೇರಿದಂತೆ ಮತ್ತಿತರರು ಹಾಜರಿದ್ದರು.