×
Ad

ಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ಅಸಹಜ ಮಗು ಜನನ

Update: 2017-09-15 22:31 IST

ಚಿಕ್ಕಮಗಳೂರು, ಸೆ.16:  ಜಿಲ್ಲೆಯ ಕೊಪ್ಪ ತಾಲೂಕಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಸಹಜ ರೀತಿಯಲ್ಲಿ ಬೆಳವಣಿಗೆ ಕಂಡಿದ್ದ ಮಗುವಿನ ಜನನವಾಗಿದ್ದು, ಜನನವಾದ ಮಗು ಕೆಲಸ ನಿಮಿಷಗಳಲ್ಲಿಯೇ ಮೃತಪಟ್ಟಿದೆ.

ಮಗುವಿನ ತಲೆಯ ಹೊರಭಾಗದಲ್ಲಿ ಮಿದುಳು ಕಾಣಿಸಿಕೊಂಡಿದೆ. ಇತ್ತೀಚೆಗೆ ಕೊಪ್ಪ ಪಟ್ಟಣದ ಮಹಿಳೆಯೋರ್ವರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿತ್ತು. ತುಂಬು ಗರ್ಭಿಣಿಯಾಗಿದ್ದ ಆಕೆ ಇಂದು ಗಂಡು ಮಗುವಿಗೆ ಜನ್ಮನೀಡಿದ್ದು, ಮಗು ಅಸಹಜ ರೀತಿಯಲ್ಲಿ ಬೆಳವಣಿಗೆ ಕಂಡು ಬಂದಿದೆ.

ಸುಮಾರು 2 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ ಇಂತಾ ಮಾದರಿಯಲ್ಲಿ ತಲೆಯ ಹೊರ ಭಾಗದಲ್ಲಿ ಮಿದುಳು ಕಾಣಿಸಿಕೊಳ್ಳುವ ಸಾದ್ಯತೆಗಳಿವೆ. ಹೆಚ್ಚು ಮಾತ್ರೆ ಸೆವನೆ ಮತ್ತು ಬ್ರೂಣಕ್ಕೆ ಪೆಟ್ಟು ಬಿದ್ದರೆ ಈ ರೀತಿ ಆಗುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆಯ ವೈದ್ಯೆ ಡಾ.ರಾಮಚಂದ್ರ ಮಾಹಿತಿ ನೀಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News