ಸುಗ್ರೀವಾಜ್ಞೆ ಅನುಮೋದನೆಗೆ ಒತ್ತಾಯಿಸಿ ಧರಣಿ
ಮಂಡ್ಯ, ಸೆ.15: ಮುಂಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕೂಡಲೇ ರಾಜ್ಯಪಾಲರು ಅನುಮೊದನೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ಸಮಿತಿ ಜಿಲ್ಲಾ ಸಂಚಾಲಕ ಕುಬೇರಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮನವಿ ಸಲ್ಲಿಸಿದ ಕಾರ್ಯಕರ್ತರು, ಸುಗ್ರೀವಾಜ್ಞೆಗೆ ಅನುಮೋದನೆ ನೀಡದಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿದರು.
ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ನೌಕರರ ಮುಂಭಡ್ತಿ ವಿಚಾರದಲ್ಲಿ ಆದೇಶ ನೀಡಿರುವ ವಿರುದ್ಧ ರಾಜ್ಯ ಸರಕಾರ ಸಗ್ರೀವಾಜ್ಞೆ ಹೊರಡಿಸಿದ್ದು, ಇದಕ್ಕೆ ಅನುಮೋದನೆ ನೀಡದೆ ರಾಜ್ಯಪಾಲರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ದೇವರಾಜು, ವಸಂತ, ಮಹೇಶ, ಮಹದೇವು, ಗವಿ, ದೇವರಾಜು, ಶ್ರೀಕಾಂತ, ಚಂದ್ರಶೇಖರ್, ಸಿದ್ದರಾಜು, ಮಹದೇವಸ್ವಾಮಿ, ಶಿವಕುಮಾರ್, ಸಿದ್ದಪ್ಪ, ಮಹೇಶ್, ಚೇತನ್, ಮೋಹನ್‍ರಾಜ್, ಪಾಂಡವಪುರ ದೇವರಾಜು, ಶ್ರೀಕಂಠ ಇತರರಿದ್ದರು.