ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಆರೋಪ
Update: 2017-09-16 19:20 IST
ಚಿಕ್ಕಮಗಳೂರು, ಸೆ.16: ನಗರದ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ವಂಚಿಸಿ ಕೃಷಿ ಭೂಮಿಯನ್ನು ನಕಲಿ ದಾಖಲಾತಿ ನೀಡಿ ಖರೀದಿಸಿರುವುದನ್ನು ಪರಿಶೀಲಿಸಿ ಕಾನೂನು ರೀತಿಯ ಕ್ರಮ ಜರಗಿಸುವಂತೆ ಕನ್ನಡಪರ ಸಂಘಟನೆಯ ಮುಖ್ಯಸ್ಥ ಮೆ.ರಾ.ಗಿರೀಶ್ ಜಿಲ್ಲಾಧಿಕಾರಿಗೆ ಶನಿವಾರ ದೂರು ಸಲ್ಲಿಸಿದರು.
ಸರ್ಕಾರಿ ಅಧಿಕಾರಿಗಳು .ವಂಚಿಸಿದವರ ಪರವಾಗಿ ನಿಂತು ವಾದಿಸುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿ ತಹಶೀಲ್ದಾರ್, ಕಂದಾಯದಿಕಾರಿಗಳು ಹಾಗೂ ಚಿಕ್ಕಮಗಳೂರು ಉಪ ನೋಂದಣಾಧಿಕಾರಿಗಳ ವಿರುದ್ಧ ಜಿಲ್ಲಾದಿಕಾರಿಗೆ, ಹಾಗೂ ಎಸಿಬಿ, ಲೋಕಾಯುಕ್ತಕ್ಕೆ ತನಿಖೆ ನಡೆಸಲು ದೂರು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರಕ್ಕೆ ವಂಚಿಸಿರುವ ವ್ಯಕ್ತಿಯ ದಾಖಲೆ ಕಲೆಹಾಕುವ ಸಮಯದಲ್ಲಿ ಆಧಾರ ರಹಿತ ಬೆದರಿಕೆ ಹಾಕುತ್ತಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡುವುದಾಗಿ ಮೇ.ರಾ.ಗಿರೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.