ದ್ವಿಚಕ್ರ ವಾಹನ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
Update: 2017-09-16 22:11 IST
ಮೈಸೂರು, ಸೆ.16: ಮನೆ ಮುಂದೆ ಬೀಗ ಹಾಕದೇ ನಿಲ್ಲಿಸಿರುವ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.
ಜೀವನ್ ಕುಮಾರ್, ಜಂಗ್ಲಿ ಜೀತು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಯಾದವಗಿರಿ ರೈಲ್ವೇ ಅಂಡರ್ ಬ್ರಿಜ್ಡ್ ಬಳಿ ನಡೆಸಿದ ನಂಬರ್ ಪ್ಲೇಟ್ ಇಲ್ಲದ ಯಮಹ ಆರ್.ಎಕ್ಸ್ 135 ಬೈಕ್‍ನಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಇವರನ್ನು ವಿಚಾರಣೆ ಮಾಡಲಾಗಿ, ಆರೋಪಿಗಳು, ವಿ.ವಿ.ಪುರಂ, ದೇವರಾಜ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 3 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿಗಳಿಂದ 1 ಲಕ್ಷ ಮೌಲ್ಯದ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.