ಹಾಸನ: ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಧರಣಿ

Update: 2017-09-16 18:18 GMT

ಹಾಸನ, ಸೆ.16: ಡಿವೈಎಸ್ಪಿ ಗಣಪತಿ ಪ್ರಕರಣವನ್ನು ಕೂಡಲೇ ಸಿಬಿಐಗೆ ತನಿಖೆಗೆ ಒಳಪಡಿಬೇಕು ಹಾಗೂ ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕದಿಂದ ನಗರದಲ್ಲಿ ಬೃಹತ್ ಧರಣಿೆ ನಡೆಸಿದರು.

ನಗರದ ಕೆ.ಆರ್.ಪುರಂನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಿಂದ ಹೊರಟ ಮೆರವಣಿಗೆ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಧರಣಿನಿರತರು, ಡಿವೈಎಸ್ಪಿ ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, 3ತಿಂಗಳೊಳಗೆ ವರದಿ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ನಿಷ್ಪಕ್ಷಪಾತ ತನಿಖೆ ನಡೆಯಲು ಈ ಪ್ರಕರಣದಲ್ಲಿ ಪ್ರಮುಖ ಆರೋಪ ಕೇಳಿ ಬರುತ್ತಿರುವ ಸಚಿವ ಜಾರ್ಜ್ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೇ ಮುಖ್ಯಮಂತ್ರಿ ತಕ್ಷಣವೇ ವಜಾಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದ ನಡೆ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಸತ್ಯಾಂಶವನ್ನು ಅರಿಯಲು ಸಿಬಿಐ ತನಿಖೆ ನಡೆಸಲೇಬೇಕೆಂದು ಬಿಜೆಪಿ ಅನೇಕ ಬಾರಿ ಹೋರಾಟ ನಡೆಸಿದೆ. ಈಗ ಸರ್ವೋಚ್ಛ ನ್ಯಾಯಾಲಯವೇ ಸಿಬಿಐ ತನಿಖೆಗೆ ಆದೇಶಿಸಿದೆ. ಇನ್ನು ಮೂರು ತಿಂಗಳೊಳಗೆ ವರದಿ ನೀಡಬೇಕು ಎಂದು ಆದೇಶಿಸಿರುವುದನ್ನು ಸ್ವಾಗತಿಸಿದರು. ಇದೇ ವೇಳೆ ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಧರಣಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್, ಉಪಾಧ್ಯಕ್ಷ ಪ್ರೀತಮ್ ಜೆ.ಗೌಡ, ಮುಖಂಡ ಹುಲ್ಲಳ್ಳಿ ಸುರೆಶ್, ಶೋಭಾನ್ ಬಾಬು, ಅಗಿಲೇ ಯೋಗೀಶ್, ವೇಣುಕುಮಾರ್, ವಿಜಯಲಕ್ಷ್ಮೀ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News