ದ್ವಿಚಕ್ರ ವಾಹನ ಕಳ್ಳತನ: ಇಬ್ಬರ ಬಂಧನ
ಮೈಸೂರು, ಸೆ.16 : ವಿವಿ ಪುರಂ ಪೊಲೀಸರು ಸೆ. 15 ರಂದು ಯಾದವಗಿರಿ ರೈಲ್ವೇ ಅಂಡರ್ ಬ್ರಿಜ್ಡ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ, ನಂಬರ್ ಪ್ಲೇಟ್ ಇಲ್ಲದ ಯಮಹ ಆರ್ ಎಕ್ಸ್ ಬೈಕ್‍ನಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಜೀವನ್ ಕುಮಾರ್ ಅಲಿಯಾಸ್ ಜಂಗ್ಲಿ ಅಲಿಯಾಸ್ ಜೀತು ಅಲಿಯಾಸ್ ಪಂಪ ಬಿನ್ ಶೇಷಾದ್ರಿ, ಮತ್ತು ಮಂಜುನಾಥ ಅಲಿಯಾಸ್ ಮಂಜು ಬಿನ್ ಈ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ.
ಇವರನ್ನು ಬೈಕ್ ಸಮೇತ ವಶಕ್ಕೆ ಪಡೆದು ವಿಚಾರಣಡ ನಡೆಸಿದಾಗ ಆರೋಪಿಗಳು ವಿ.ವಿ.ಪುರಂ, ದೇವರಾಜ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 3 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿಗಳಿಂದ ಒಟ್ಟು 1 ಲಕ್ಷ ರೂ ಮೌಲ್ಯದ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಇವರು ಮನೆ ಮುಂದೆ ಬೀಗ ಹಾಕದೇ ನಿಲ್ಲಿಸಿರುವ ದ್ವಿಚಕ್ರ ವಾಹನಗಳ ಇಗ್ನಿಷನ್ ಡೈರೆಕ್ಟ್ ಮಾಡಿ ಬೈಕ್ ಕಳ್ಳತನ ಮಾಡಿತ್ತಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ. ಆಮ್ಟೆ, ನರಸಿಂಹರಾಜ ವಿಭಾಗದ ಎಸಿಪಿ ಉಮೇಶ್ ಜಿ ಸೇಠ್, ವಿವಿ ಪುರಂ ಪೊಲೀಸ್ ಠಾಣೆ ಇನ್ ಸ್ಪೆಪೆಕ್ಟರ್ ಸಿ.ವಿ ರವಿ, ಸಿಬ್ಬಂದಿ ಸೋಮಶೇಖರ್, ಪ್ರಸನ್ನ, ಈರಣ್ಣ, ಮಹೇಶ ಅವರು ಪಾಲ್ಗೊಂಡಿದ್ದರು.