ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಡಿಸಿಪಿ ವಿಷ್ಣುವರ್ಧನ್ ಭೇಟಿ, ಪರಿಶೀಲನೆ
Update: 2017-09-17 20:47 IST
ಮೈಸೂರು, ಸೆ.17: ನಗರದ ಕೇಂದ್ರ ಕಾರಾಗೃಹದ ಮೇಲೆ ಡಿಸಿಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಕಾರಾಗೃಹದ ಪ್ರತಿಯೊಂದು ಜಾಗಗಳನ್ನು ಪರಿಶೀಲಿಸಿದರು.
ಬಂಧಿಖಾನೆ ಐಜಿಪಿ ಸೂಚನೆ ಮೇರೆಗೆ ಏಕಾಏಕಿ ದಾಳಿ ನಡೆಸಿದ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು 5 ಡಿಎಆರ್ ವಾಹನದಲ್ಲಿ ಆಗಮಿಸಿ ಕಾರಾಗೃಹದ ಮೂಲೆ ಮೂಲೆ ಹಾಗೂ ಕೈದಿಗಳ ಕೋಣೆಗಳನ್ನು ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಕಾರಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಚಟುವಟಿಕೆ, ಸುಪಾರಿಗಳು ಮತ್ತು ಅಲ್ಲಿ ಖೈದಿಗಳು ರಾಜಾರೋಷವಾಗಿ ವಿರಮಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿ ಪರಿಶೀಲನೆ ನಡೆದಿದೆ ಎಂದು ತಿಳಿದು ಬಂದಿದೆ.