ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು: ಶಾಸಕ ನರೇಂದ್ರ
ಹನೂರು, ಸೆ.17: ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಿಸಿ ರಸ್ತೆ ಡಾಂಬರೀಕರಣ, ಕುಡಿಯುವ ನೀರು, ಹಾಗೂ ಮೂಲಭೂತ ಸೌಕರ್ಯ ಒದಗಿಸಲಾಗುವುದೆಂದು ಶಾಸಕ ನರೇಂದ್ರರವರು ಭರವಸರೆ ನೀಡಿದರು.
ತಾಲೂಕಿನ ಶ್ಯಾಗ್ಯ ಗ್ರಾಪಂ ವ್ಯಾಪ್ತಿಯ ಗಾಣಿಗ ಮಂಗಲದಲ್ಲಿ ಸಮಾಜಕಲ್ಯಾಣ ಇಲಾಖೆ ವತಿಯಿಂದ 20ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗೆ ಭೂಮಿ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಹನೂರು ವಿಧಾನ ಸಭಾಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಂಯಿಂದ ಹಲವಾರು ಸಮುದಾಯ ಭವನಗಳು ಹಾಗೂ ಸಿಸಿ ರಸ್ತೆ , ಚರಂಡಿಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದು, ಅದರಂತೆ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಲೇಖಾರವಿಕುಮಾರ್, ತಾಲೂಕು ಸ್ಥಾಯಿಸಮಿತಿ ಅಧ್ಯಕ್ಷ ಅಹ್ಮದ್, ತಾಪಂ ಸದಸ್ಯರಾದ ಸುಮತಿ , ಗ್ರಾಪಂ ಅಧ್ಯಕ್ಷ ಜಾನ್ ಪಾಲ್ , ಮುಖಂಡರಾದ ಬಸವರಾಜಪ್ಪ, ಮುರುಗೇಶ್ ಇನ್ನಿತರರು ಹಾಜರಿದ್ದರು.