ನರೇಂದ್ರ ಮೋದಿ ಜನ್ಮ ದಿನಾಚರಣೆ: ಬಿಜೆಪಿಯಿಂದ ಸ್ವಚ್ಛತಾ ಕಾರ್ಯ
ದಾವಣಗೆರೆ, ಸೆ.17: ಪ್ರಧಾನಮಂತ್ರಿ ಮೋದಿ ಜನ್ಮದಿನದ ಅಂಗವಾಗಿ ನಗರದಲ್ಲಿ ಭಾನುವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನ ಪರಿಕಲ್ಪನೆಯಡಿ ನಗರದ ಜಗಳೂರು ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಈ ಸ್ವಚ್ಛತಾ ಕಾರ್ಯಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್ ಪೊರಕೆ ಹಿಡಿದು ಕಸ ಗುಡಿಸಿ ಶ್ರಮದಾನ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ 67ನೆ ವರ್ಷದ ಹುಟ್ಟುಹಬ್ಬವನ್ನು ಸೇವಾ ದಿವಸ್ ಆಚರಣೆ ಅಂಗವಾಗಿ ನಗರದಲ್ಲಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನರೇಂದ್ರ ಮೋದಿ ದೇಶದಲ್ಲಿ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಇಂತಹ ಮಾಹನ್ ನಾಯಕ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.
ಇದಕ್ಕೂ ಮುನ್ನಾ ನಗರದ ದುರ್ಗಾಂಬಿಕ ವೃತ್ತದಲ್ಲಿ ಶಿವಾಜಿ ಪ್ರತಿಮೆ ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡಿ ಅಲ್ಲಿಯೂ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು ಹಾಗೂ 37ನೆ ವಾರ್ಡ್‍ನ ಗಣೇಶ ದೇವಸ್ಥಾನದ ಹತ್ತಿರ ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ ನಡೆಸಿದರು. ನಂತರ ಕೆ.ಆರ್. ಮಾರ್ಕೆಟ್ ಬಳಿಯ ಸರ್ಕಾರಿ ಹೆರಿಗೆ ಆಸ್ಪತ್ರೆ ಹಾಗೂ ನಿಟ್ಟುವಳ್ಳಿ ಇಎಸ್‍ಐ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಜಯಪ್ರಕಾಶ್ ಅಂಬರ್‍ಕರ್, ಪ್ರೊ.ಲಿಂಗಣ್ಣ, ಎಚ್. ಆನಂದಪ್ಪ, ಅಣಬೇರು ಜೀವನಮೂರ್ತಿ, ಕೊಂಡಜ್ಜಿ ಜಯಪ್ರಕಾಶ್, ಮಟ್ಟಿಕಲ್ ಕರಿಬಸಪ್ಪ, ಎಚ್.ಕೆ. ಬಸವರಾಜ್, ರಾಜನಹಳ್ಳಿ ಶಿವಕುಮಾರ್, ಗೌತಮ್ ಜೈನ್, ಪಿ.ಸಿ. ಶ್ರೀನಿವಾಸ್, ಶಿವನಗೌಡ ಟಿ. ಪಾಟೀಲ್, ಪ್ರವೀಣ್ ಜಾಧವ್, ಬೇತೂರು ಬಸವರಾಜ್, ಎಂ.ಅಂಜಿನಪ್ಪ, ಎಲ್.ಬಸವರಾಜ್, ಶಿವು ತರಕಾರಿ, ರಮೇಶ್ ನಾಯ್ಕ್, ಧನುಷ್ ರೆಡ್ಡಿ, ಸಹನಾ ರವಿ, ಸರೋಜಾ ದಿಕ್ಷೀತ್, ದೇವಿರಮ್ಮ, ಸವಿತಾ ರವಿಕುಮಾರ್, ಭಾಗ್ಯ ಪಿಸಾಳೆ ಇದ್ದರು.