×
Ad

ನರೇಂದ್ರ ಮೋದಿ ಜನ್ಮ ದಿನ: ಎಪಿಎಂಸಿ ಆವರಣದಲ್ಲಿ ಶ್ರಮದಾನ

Update: 2017-09-17 23:29 IST

ಕಡೂರು, ಸೆ.17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶ್ರಮದಾನ ನಡೆಸಲಾಯಿತು.

ರವಿವಾರ ಬೆಳಗ್ಗೆ ತಾಲೂಕು ಬಿಜೆಪಿ ಅಧ್ಯಕ್ಷ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು ಮತ್ತು ಬಾಳೆಹೊನ್ನೂರು ರಂಭಾಪುರಿ ಬೀರೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಶ್ರಮದಾನ ನಡೆಸಲಾಯಿತು.

ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಪಟ್ಟಣದಲ್ಲಿ ನಡೆಯುವ ದಸರಾ ದರ್ಬಾರ್ ಕಾರ್ಯಕ್ರಮದ ಅಂಗವಾಗಿ ವಿಜಯದಶಮಿ ಹಬ್ಬದಂದು ಬನ್ನಿ ಮರಕ್ಕೆ ಶಮಿ ಪೂಜೆ ನೆರವೇರಿಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಮುಖಂಡರು ಬನ್ನಿಮರದ ಸುತ್ತ-ಮುತ್ತಲಿನ ಗಿಡ-ಗಂಟಿಗಳನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.

ಮಾಧ್ಯಮಗಳೊಂದಿಗೆ ಬೆಳ್ಳಿಪ್ರಕಾಶ್ ಮಾತನಾಡಿ, ದೇಶದ ಜನಸೇವಕ ಮೋದಿಯವರ ಹುಟ್ಟು ಹಬ್ಬವನ್ನು ಶ್ರಮದಾನ ಮಾಡುವ ಮೂಲಕ ರಾಜ್ಯಾದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈಡೀ ದೇಶದಲ್ಲಿ ಇಂದು ಒಂದು ಗಂಟೆ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಈ ಸಂದರ್ಭ ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಸತ್ಯನಾರಾಯಣ, ಮುಖಂಡರಾದ ಹೆಚ್.ಎಂ. ರೇವಣ್ಣಯ್ಯ, ಕೆ.ಎನ್. ಬೊಮ್ಮಣ್ಣ, ನಾರಾಯಣಸ್ವಾಮಿ, ಬಂಕ್‍ಮಂಜು, ಮರುಗುದ್ದಿ ಮನು, ಸ್ವಾಮಿ, ಮಲ್ಲಿಕಾರ್ಜುನ, ಸತೀಶ್, ಕುರುಬಗೆರೆ ಮಹೇಶ್, ಸುಂದರೇಶ್, ಮೌನೇಶ್,  ನಾಗರಾಜು, ಶಿವು, ನಂಜುಂಡ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News