ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 58ನೇ ವಾರ್ಷಿಕ ಮಹಾಸಭೆ
ಸುಂಟಿಕೊಪ್ಪ,ಸೆ.18: ಗ್ರಾಮೀಣಾ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಹಲವು ವರ್ಷಗಳಿಂದ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದ್ದು, ಮುಂದಿನ ದಿನಗಳ್ಲಿಯೂ ಇದೇ ರೀತಿಯ ಸಹಕಾರ ನೀಡಿದರೇ ಇನ್ನಷ್ಟು ಲಾಭದಾಯಕ ಸಂಘವಾಗಿ ಮುಂದುವರೆಸಲು ಸಾದ್ಯ ಎಂದು ಸಂಘದ ಅಧ್ಯಕ್ಷ ಎನ್.ಸಿ. ಪೊನ್ನಪ್ಪ( ಕ್ಲೈವ) ಹೇಳಿದರು.
ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ಸೋಮವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 58ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 34,27,034,19 ಗಳಷ್ಟು ಲಾಭಗಳಿಸಿದೆ. ಸಂಘದಲ್ಲಿ 1648 ಜನ ಸದಸ್ಯರಿದ್ದು,ರೂ. 574.60 ಲಕ್ಷ ಠೇವಣಿಯನ್ನು ಹೊಂದಿದ್ದು, ಕಳೆದ ಬಾರಿಗಿಂತ ಶೇ.34.76 ರಷ್ಟು ವೃದ್ಧಿಯಾಗಿದೆ.ಸಂಘದ ವತಿಯಿಂದ ವಾರ್ಷಿಕ 83 ಕೋಟಿಯಷ್ಟು ವಹಿವಾಟು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಘದಿಂದ ಅಲ್ಪಾವಧಿ ಕಿಸಾನ್ ಕಾರ್ಡು ಸಾಲ 596 ಸದಸ್ಯರಿಗೆ ರೂ.902.10ಲಕ್ಷ, ಮಧ್ಯಮಾವಧಿ ಸಾಲ 64.87 ಲಕ್ಷ, ವಾಹನ ಸಾಲ16.99 ಲಕ್ಷ, ಸ್ವಸಹಾಯ ಗುಂಪಿನ ಸಾಲ ರೂ.22.5ಲಕ್ಷ, ಠೇವಣಿ ಸಾಲ 24.41 ಲಕ್ಷ, ಆಭರಣ ಸಾಲ ರೂ.588.14 ¯ಕ್ಷ ಮತ್ತು ಇತರೆ ಸಾಲಗಳನ್ನು ನೀಡಿದ್ದು, ಶೇ99 ರಷ್ಟು ವಸೂಲಾತಿಯಾಗಿದೆ ಎಂದರು.
ಸಂಘವು ಬ್ಯಾಂಕಿನ ಮುಂಭಾಗದ ವಾಣಿಜ್ಯ ಸಂಕೀರ್ಣ ಮತ್ತು ಗೋದಾಮು ಕಟ್ಟಡ, ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ ನೀಡಿದ್ದು, ಅಲ್ಲದೇ ಸಂಕೀರ್ಣದ ಎರಡನೇ ಅಂತಸ್ತನ್ನು ಸಭೆ, ಸಮಾರಂಭಗಳಿಗೆ ನೀಡಲಾಗುತ್ತದೆ ಎಂದರಲ್ಲದೇ,ಸಂಘದ ಹಾಲಿ ನಿರ್ದೇಶಕ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಎಂ.ಎನ್. ಕೊಮಾರಪ್ಪ ಅವರ ಶ್ರಮದಿಂದ ಕೆ.ಡಿ.ಸಿ.ಸಿ ಬ್ಯಾಂಕಿನಿಂದ ಕಟ್ಟಡ ಅಭಿವೃದ್ಧಿಗಾಗಿ ರೂ.2 ಲಕ್ಷ ಪ್ರೋತ್ಸಾಹ ಧನವನ್ನು ಮಂಜೂರು ಮಾಡಿರುತ್ತಾರೆ ಎಂದು ಅವರನ್ನು ಅಭಿನಂದಿಸಿದರು.
ಸಭೆಯಲ್ಲಿ ಸಂಘದ ಕೆಲವು ಲೋಪದೋಷಗಳನ್ನು ನೆರೆದಿದ್ದ ಸದಸ್ಯರುಗಳು ಪ್ರಸ್ತಾಪಿಸಿದಾಗ ಸ್ವಲ್ಪ ಗೊಂದಲ ಉಂಟಾದರೂ ಸಂಘದ ಅಧ್ಯಕ್ಷರು ಸಮರ್ಪಕವಾದ ಉತ್ತರವನ್ನು ನೀಡಿ ಸಮಸ್ಯೆಯನ್ನು ತಿಳಿಗೊಳಿಸಿದರು.
ಇದೇ ಸಂದರ್ಭ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಬಿ.ಪಿ.ಬೋಜಮ್ಮ ಮತ್ತು ಬಿ.ಕೆ.ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು
ಮಹಾಸಭೆಯಲ್ಲಿ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ನಿರ್ದೇಶಕರುಗಳಾದ ಎಂ.ಎನ್.ಕೊಮಾರಪ್ಪ, ಎಸ್.ಪಿ.ನಿಂಗಪ್ಪ, ಕೆ.ಎಸ್.ಮಂಜುನಾಥ್, ಪಿ.ಪಿ.ಲೀಲಾವತಿ, ವೈ.ಎಲ್.ತಾರಾಮಣಿ, ಜರ್ಮಿ ಡಿಸೋಜ, ಎಂ.ಎ.ಕುಟ್ಟಪ್ಪ,ದಾಸಂಡ ರಮೇಶ್ ಚಂಗಪ್ಪ, ಡಿ.ಕೆ.ಗಂಗಾಧರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಇದ್ದರು.
ಅಧ್ಯಕ್ಷ ಎನ್,ಸಿ.ಪೊನ್ನಪ್ಪ ( ಕ್ಲೈವ) ಸ್ವಾಗತಿಸಿ, ನಿರ್ದೇಶಕ ಕೆ.ಎಸ್.ಮಂಜುನಾಥ್ ವಂದಿಸಿ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯಗೊಂಡಿತು.