ಬೆಳೆ ವಿಮೆ ತಾರತಮ್ಯ: ವಿವಿಧ ರೈತ ಸಂಘದಿಂದ ತಹಶೀಲ್ದಾರಿಗೆ ಮನವಿ
ಮುಂಡಗೋಡ, ಸೆ.19: ತಾಲೂಕಿನ ರೈತರಿಗೆ ಬೆಳೆ ವಿಮೆ ನೀಡುವಲ್ಲಿ ತಾರತಮ್ಯ ಮಾಡಿದ್ದು, 8 ದಿನದೊಳಗಾಗಿ ಈ ರೈತರ ಖಾತೆಗೆ ಜಮಾ ಆಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪಟ್ಟಣದಲ್ಲಿ ಮೇರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ತಾಲೂಕಿನ 6 ಪಂಚಾಯತ್ ವ್ಯಾಪ್ತಿಯ ರೈತರಿಗೆ ಬೆಳೆವಿಮೆಯು ಜಮವಾಗಿಲ್ಲಾ, 8 ದಿನದೊಳಗಾಗಿ ರೈತರ ಖಾತೆಗಳಿಗೆ ವಿಮಾ ಹಣ ಜಮೆ ಆಗದಿದ್ದಲ್ಲಿ ತಾಲೂಕಾ ಕಚೇರಿಗೆ ಮುತ್ತಿಗೆ ಮತ್ತು ಜಿಲ್ಲಾದ್ಯಂತ ಪ್ರತಿಭಟಸಲಾಗುವುದು. ಈ ಮನವಿಯನ್ನು ಪರಿಶೀಲಿಸಿ ನೀರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅಧ್ಯಕ್ಷ ಶಂಭಣ್ಣ ಕೊಳೂರ, ರೈತ ಮುಖಂಡರಾದ ಲೋಹಿತ ಮಟ್ಟಿಮನಿ, ಮಲ್ಲಿಕಾರ್ಜುನ ಕುಟ್ರಿ, ವಾಯ.ಪಿ ಪಾಟೀಲ್, ಪಾಂಡುರಂಗ ಪವಾರ, ರವಿ ವಾಲ್ಮೀಕಿ, ಮೌನೇಶಪ್ಪ ಕಂಬಾರ, ಗದಗಯ್ಯಾ ಉಗ್ಗಿನಕೇರಿ ಮತ್ತಿತರರಿದ್ದರು.