ಕಡೂರು: ದಸರಾ ದರ್ಬಾರ್‍ಗೆ ಭರದ ಸಿದ್ಧತೆ
Update: 2017-09-19 21:22 IST
ಕಡೂರು, ಸೆ.19: ಪಟ್ಟಣದಲ್ಲಿ ನಡೆಯಲಿರುವ ದಸರಾ ದರ್ಬಾರ್ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಕಾರ್ಯಕ್ರಮ ನಡೆಯುವ ಎಪಿಎಂಸಿ ಆವರಣದಲ್ಲಿ ಪೆಂಡಾಲ್ ನಿರ್ಮಾಣ ಕಾರ್ಯ ನಡೆದಿದೆ.
ಸೆ.21 ರಿಂದ 30ರವೆರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಬುಧವಾರ ಬಾಳೆಹೊನ್ನೂರು ಶ್ರೀಗಳು ಪುರಪ್ರವೇಶ ಮಾಡಲಿದ್ದು. ಇದಕ್ಕಾಗಿ ಸರ್ವ ಸಿದ್ಧತೆಗಳು ನಡೆಯುತ್ತಿವೆ.
ಈ ಸಂದರ್ಭ ಬಾಳೆಹೊನ್ನೂರು ರಂಭಾಪುರಿ ಶಾಖ ಮಠದ ಶ್ರೀರುದ್ರಮಿನಿ ಶಿವಾಚಾರ್ಯಸ್ವಾಮಿ, ಮಹೋತ್ಸವದ ಕಾರ್ಯಾದ್ಯಕ್ಷ ಬೆಳ್ಳಿಪ್ರಕಾಶ್,ಕೆಂಪರಾಜು, ಕಾರ್ಯದರ್ಶಿ ಎಚ್.ಎಂ.ಲೋಕೇಶ್, ಪೆಂಡಾಲ್ ಸಮಿತಿ ಅಧ್ಯಕ್ಷ ಸಾಣೆಹಳ್ಳಿ ಆರಾಧ್ಯ, ಸದಾಶಿವಪ್ಪ, ಎಚ್.ವಿ. ಗಿರೀಶ್ ಉಪಸ್ಥಿತರಿದ್ದರು.