ದಾರ್ಶನಿಕರ ಜಯಂತಿ ಮಾಡುವ ಬದಲು ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಾ.ಕೆ.ಸುರೇಶ್

Update: 2017-09-19 18:20 GMT

ಸೊರಬ, ಸೆ.19: ಪ್ರಕೃತಿಯಲ್ಲಿನ ಸಕಲ ಜೀವ ರಾಶಿಗಳಲ್ಲೂ ಚೈತನ್ಯದ ನೆಲೆಯನ್ನು ತನ್ನ ವಿಶಿಷ್ಟ ಕಣ್ಣಿನಿಂದ ಮೊದಲು ನೋಡಿದವನು ವಿಶ್ವಕರ್ಮ ಆಗಿದ್ದಾನೆ ಎಂದು ಶಿಕ್ಷಕ ಸಾ.ಕೆ.ಸುರೇಶ್ ಎಂದು ಪ್ರತಿಪಾದಿಸಿದರು.

ಪಟ್ಟಣದ ರಂಗ ಮಂದಿರದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಲನ್ನು ಕೆತ್ತಿ ಒಂದು ಶಿಲೆಗೆ ರೂಪ ಕೊಡುವ ಶಿಲ್ಪಿ ಒಂದು ಜನಾಂಗದ ಸಂಸ್ಕೃತಿ ಹಾಗೂ ಸಂಪ್ರದಾಯ ರೂಪ ತಾಳಲು ಕಾರಣವಾಗುತ್ತಾನೆ. ವಿಶ್ವಕ್ಕೆ ಆಧ್ಯಾತ್ಮದ ಬೆಳಕು ನೀಡುವ ಮೂಲಕ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವಕರ್ಮ ಏಕ ದೇವತಾ ಆರಾಧನೆ ಪತ್ರಿಪಾದಿಸಿದವನು. ದಾರ್ಶನಿಕರ ವಿಚಾರಧಾರೆಗಳನ್ನು ಜಯಂತಿ ಮಾಡುವ ಮೂಲಕ ನೆನಪಿಸಿಕೊಳ್ಳುವ ಬದಲು ಅವರ ಆದರ್ಶವನ್ನು ಸದಾ ಜೀವನದಲ್ಲಿ ಅಳವಡಿಸಿಕೊಳ್ಳುವ ಕಡೆಗೆ ಪ್ರತಿಯೊಬ್ಬರು ಚಿಂತಿಸಬೇಕು ಎಂದರು. 

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನಯ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಷಣ್ಮುಖಾಚಾರ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ರತ್ನಮ್ಮ  ಮಾತನಾಡಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್,  ಪಟ್ಟಣ ಪಂಚಾಯತ್ ಅಧ್ಯಕ್ಷೆ ಬೀಬೀ ಜುಲೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ಸದಸ್ಯ ಪ್ರಶಾಂತ ಮೇಸ್ತ್ರಿ, ಎಚ್.ಗಣಪತಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಾಲಚಂದ್ರ, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ಕೆರೆಹಳ್ಳಿ ವೆಂಕಟೇಶ್ ಕಾಮತ್, ಮೋಹನರಾಜ್, ಆಂಜನೇಯ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News