ನಾಪೋಕ್ಲು: ಮೇರಿ ಮಾತೆ ದೇವಾಲಯದ ವಾರ್ಷಿಕ ಉತ್ಸವ

Update: 2017-09-19 18:21 GMT

ನಾಪೋಕ್ಲು, ಸೆ.19: ಸ್ಥಳೀಯ  ಮೇರಿ ಮಾತೆ ದೇವಾಲಯದ ವಾರ್ಷಿಕ ಉತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಉತ್ಸವದ ಅಂಗವಾಗಿ ಚರ್ಚ್‍ನಲ್ಲಿ  ವಿಶೇಷ  ಪ್ರಾರ್ಥನೆ, ಬಲಿಪೂಜೆಯನ್ನು ಮೈಸೂರು ಪ್ರಾಂತ್ಯದ ಧರ್ಮಗುರುಗಳಾದ ಕೋಲಸೊ ಅವರು ಆಶೀರ್ವಚನೊಂದಿಗೆ  ನೆರವೇರಿಸಿದರು.

ಈ ಸಂದರ್ಭ ವಿರಾಜಪೇಟೆಯ ಧರ್ಮಗುರುಗಳಾದ ಮದಲೈ ಮುತ್ತು , ಮಡಿಕೇರಿ ಚರ್ಚ್‍ನ  ಧರ್ಮಗುರುಗಳಾದ ಜಾನ್, ನಾಪೋಕ್ಲು ಧರ್ಮಗುರುಗಳಾದ ವಿಘ್ನೇಸ್ಸ್ ಮರ್ಕರನ್ಸ್  ಇವರುಗಳು ಉಪಸ್ಥಿತರಿದ್ದರು.

ಬಳಿಕ ಮೇರಿ ಮಾತೆಯ  ಮೂರ್ತಿಯನ್ನು ವಿದ್ಯುತ್ ಅಲಂಕೃತ  ಭವ್ಯ ಮಂಟಪದಲ್ಲಿರಿಸಿ ಕ್ರೈಸ್ತ  ಬಾಂಧವರು  ಮೇಣದ  ಭತ್ತಿಯ  ಬೆಳಕು ವಾದ್ಯಮೇಳಗಳೊಂದಿಗೆ   ಮುಖ್ಯಬೀದಿಯಲ್ಲಿ   ಮೆರವಣಿಗೆ  ತೆರಳಿ  ಹಿಂದುರಿಗಿದ  ಬಳಿಕ ಸಿಡಿಮದ್ದಿನ ಪ್ರದರ್ಶನ  ಏರ್ಪಾಡಿಸಲಾಗಿತ್ತು. 

ಈ  ಸಂದರ್ಭ  ಪ್ರಮುಖರಾದ  ಜಾಯ್ , ಜಾರ್ಜ್, ಎಲ್ಸಮ್ಮ, ಡೇರಿನಾ , ಫೌಲಿನಾ, ಡೈಸನ್, ಸಿರಿಯಾಕ್, ಲೂಯಿಸ್ ರೋಣಿ, ಸೇರಿದಂತೆ  ಅಧಿಕ  ಸಂಖ್ಯೆಯಲ್ಲಿ  ಕ್ರೈಸ್ತ ಬಾಂಧವರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News