ಸೆ.25 ರಂದು ದಸರಾ ಕವಿಗೋಷ್ಠಿ: ಐತಿಚಂಡ ರಮೇಶ್ ಉತ್ತಪ್ಪ
ಮಡಿಕೇರಿ, ಸೆ.20: ನಾಡಹಬ್ಬ ಮಡಿಕೇರಿ ದಸರಾ ಪ್ರಯುಕ್ತ ಪ್ರತೀ ವರ್ಷ ಬಹು ಭಾಷಾ ಕವಿಗೋಷ್ಠಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸೆ.25 ರಂದು ಕವಿಗೋಷ್ಠಿ ಕಾರ್ಯಕ್ರಮ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಸುಮಾರು 40 ಕವಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಭಾಷೆಯ ಕವನಗಳನ್ನು ಆಹ್ವಾನಿಸಲಾಗಿದ್ದು, ಒಟ್ಟು 160 ಕವನಗಳು ಬಂದಿವೆ. ಹಲವು ಕವನಗಳು ಉತ್ತಮವಾಗಿದ್ದು, ಆಯ್ಕೆ ಮಾಡುವುದು ಕಠಿಣ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಹಿತಿ ನಾಗೇಶ್ ಕಾಲೂರು ಅವರ ನೇತೃತ್ವದಲ್ಲಿನ ಆಯ್ಕೆ ಸಮಿತಿಯನ್ನು ರಚಿಸಿ ಜವಾಬ್ದಾರಿ ನೀಡಲಾಯಿತು ಎಂದರು.
ಕೇವಲ ಕವನಗಳನ್ನು ಮಾತ್ರ ಜೆರಾಕ್ಸ್ ಮಾಡಿಸಿ, ಕವಿಗಳ ಹೆಸರನ್ನು ಗೌಪ್ಯವಾಗಿಟ್ಟು ಸಮಿತಿಗೆ ನೀಡಲಾಗಿತ್ತು. ಈ ತಂಡ ಕವನಗಳನ್ನು ಪರಿಶೀಲಿಸಿ ಹಲವು ಮಾನದಂಡಗಳನ್ನು ಅನುಸರಿಸಿ ಆಯ್ಕೆ ಮಾಡಿದೆ. ನಂತರ ಅವುಗಳಲ್ಲಿ ಸಾಧ್ಯವಾದಷ್ಟು ಜಿಲ್ಲೆಯ ಕವಿಗಳಿಗೆ ಹಾಗೂ ಹೊಸಬರಿಗೆ ಆದ್ಯತೆ ನೀಡಲಾಗಿದೆ. ಗುಣಮಟ್ಟದೊಂದಿಗೆ ಹೊಸಬರಿಗೆ ಪ್ರೋತ್ಸಾಹ ನೀಡುವುದು ನಮ್ಮ ಸಮಿತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಸೆ.25ರಂದು ಬೆಳಗ್ಗೆ 10.30ಕ್ಕೆ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಸರಾ ಸಮಿತಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ, ನಗರಸಭೆ ಆಯುಕ್ತರಾದ ಬಿ. ಶುಭಾ, ಮಡಿಕೇರಿ ಪತ್ರಕರ್ತರ ಸಂಘ ಹಾಗೂ ಪ್ರಸೆ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪತ್ರಿಕಾ ಭವನದ ಮ್ಯಾನೇಜಿಂಗ್ ಟ್ರಸ್ಟಿ ಮನುಶಣೈ ಮುಂತಾದವರು ಭಾಗವಹಿಲಿದ್ದಾರೆ ಎಂದು ಮಾಹಿತಿ ನೀಡಿದರು.
ಕವಿಗೋಷ್ಠಿ: ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತರಾದ ಬೆಂಗಳೂರಿನ ಗಿರೀಶ್ ರಾವ್ (ಜೋಗಿ) ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಆಹ್ವಾನಿತ ಕವಿಗಳು: ಮೂವೆರ ರೇಖಾ ಪ್ರಕಾಶ್, ಕೊಟ್ಟಕೇರಿಯನ ಲೀಲಾ ದಯಾನಂದ, ನಾಗೇಶ್ ಕಾಲೂರು.
ಕವಿಗಳು: ಸುದರ್ಶನ್ ಕೆ.ಪಿ, ದಿವ್ಯಾ ಮಂಡೀರ, ಕೃತ ಬೆಸೂರು, ಆಶಾಪ್ರಭು, ಬಿ. ಆರ್ ರಾಮಚಂದ್ರ ರಾವ್, ನರಿಯೂರು ಎಲ್ ದಯಾನಂದ, ಕಸ್ತೂರಿ ಗೋವಿಂದಮ್ಮಯ್ಯ, ವಿ.ಎನ್ ರಂಜಿತಾ ಕಾರ್ಯಪ್ಪ, ವೈಲೇಶ ಪಿ.ಎಸ್, ರಾಚು ಶ್ಯಾಂ, ಸುಕುಮಾರ ತೊರೆನೂರು, ಕಾವ್ಯ ಎ.ಎಸ್, ಎಸ್.ಎ ಅನಘ, ಅಪರ್ಣ, ಅಲ್ಲಾರಂಡ ವಿಠಲ ನಂಜಪ್ಪ. ಎ.ವಿ ಮಂಜುನಾಥ್, ಯು.ಆರ್ ಅಕ್ರಂ. ಸಬಲಂ ಭೋಜಣ್ಣ ರೆಡ್ಡಿ, ಕಡ್ಲೇರ ಜಯಲಕ್ಷ್ಮೀ ಮೋಹನ್ ಕುಮಾರ್, ಎಸ್.ಕೆ. ಈಶ್ವರಿ, ಶೈಲಜ ದಿನೇಶ್ ಬಾರಿಕೆ, ಎಂ.ಕೆ ನಳಿನಾಕ್ಷಿ, ಮುಲ್ಲೇಂಗಡ ರೇವತಿ ಪೂವಯ್ಯ, ಕಾಯಪಂಡ ಬಿ.ಟಾಟಾ ಚಂಗಪ್ಪ, ನಂಬಿಯಪಂಡ ರಂಜು ನಾಣಯ್ಯ, ಮುಳುವಂಡ ನಳಿನಿ ಬಿಂದು, ಸುನಿತಾ ವಿಶ್ವನಾಥ್, ಎಂ.ಇ ಮನೋಜ್, ದೀಪಿಕಾ ಕೆ.ಎಸ್, ಜಿ. ನೀಲಪ್ಪ, ಬಿ. ಗಣೇಶ್ ಪೈ, ಕಿಗ್ಗಾಲು ಎಸ್ ಗಿರೀಶ್, ಸಿಂಚನ ವಿ.ಡಿ, ಚೆರಿಯಮನೆ ಪ್ರೀತಂ, ಶ್ರಾವಣಿ ಎಂ.ಯು, ಇಂಚರ ಎಂ.ಎಸ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಂ.ನಾಸಿರ್, ಸದಸ್ಯರುಗಳಾದ ಕುಡೆಕಲ್ ಸಂತೋಷ್ ಹಾಗೂ ವಿಘ್ನೇಶ್ ಭೂತನಕಾಡು ಉಪಸ್ಥಿತರಿದ್ದರು.