ಚಿಕ್ಕಮಗಳೂರು: ಎಂಐಜಿ ಪಾರ್ಕ್ ಅವ್ಯವಸ್ಥೆ ಸರಿಪಡಿಸಲು ಒತ್ತಾಯ
Update: 2017-09-20 22:27 IST
ಚಿಕ್ಕಮಗಳೂರು, ಸೆ.20: ನಗರದ ಹೌಸಿಂಗ್ ಬೋರ್ಡ್ 3ನೆ ಹಂತದ ಎಂಐಜಿ ಪಾರ್ಕ್ ಅವ್ಯವಸ್ಥೆಯಲ್ಲಿ ಕೂಡಿದ್ದು, ಅಲ್ಲಿಯ ಶೌಚಾಲಯಕ್ಕೆ ಯುಜಿಡಿ ಸಂಪರ್ಕ ಒದಗಿಸಲು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಮುಖಂಡರು ಬುಧವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಕ್ಕಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಎಂಐಜಿ ಪಾರ್ಕ್ ಅವ್ಯವಸ್ಥೆಯ ಆಗರವಾಗಿದೆ. ಎಲ್ಲೆಂದರಲ್ಲಿ ಕಸ ತುಂಬಿಕೊಂಡಿದ್ದು, ಕಸದ ವಿಲೇವಾರಿ ಇಲ್ಲಿ ನಡೆಯುತ್ತಿಲ್ಲ. ದುರ್ವಾಸನೆಯಿಂದ ಈ ಪರಿಸರದಲ್ಲಿ ಸಾರ್ವಜನಿಕರು ಓಡಾಡಲು ತೊಂದರೆ ಎದುರಾಗಿದೆ. ಅಲ್ಲದೆ, ಈ ವಾರ್ಡ್‍ನ ಮನೆಗಳ ಶೌಚಾಲಯಕ್ಕೆ ಅಳವಡಿಸಬೇಕಾದ ಯುಜಿಡಿ ಸಂಪರ್ಕ ನೀಡಿಲ್ಲ. ತಕ್ಷಣ ಈ ಬಗ್ಗೆ ಕ್ರಮ ಜರುಗಿಸುವಂತೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಆಪ್‍ನ ನಗರವಾರ್ಡ್ ಉಸ್ತುವಾರಿ ಎಚ್.ಮೋಹನ್, ಚಂದ್ರಕಲಾ, ಬಿ.ಎಂ.ಪಾರ್ವತಮ್ಮ, ಎ.ಆರ್.ಸುಭದ್ರ ಮತ್ತಿತರರಿದ್ದರು.