×
Ad

ಮನುಷ್ಯ ಹಣದ ಹಿಂದೆ ಓಡಿ ತನ್ನ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ: ಡಾ.ಪಂಡಿತರಾಧ್ಯ ಸ್ವಾಮಿ

Update: 2017-09-20 22:47 IST

ಕಡೂರು, ಸೆ.20: ಮನುಷ್ಯ ಹಣದ ಹಿಂದೆ ಓಡಿ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಸಾಣೆಹಳ್ಳಿಯ ತರಳಬಾಳು ಶಾಖ ಮಠದ ಡಾ.ಪಂಡಿತರಾಧ್ಯ ಸ್ವಾಮಿ ತಿಳಿಸಿದ್ದಾರೆ. 

ಯಳ್ಳಂಬಳಸೆ ಗ್ರಾಮದ ಮಾಜಿ ಶಾಸಕ ವೈ.ಸಿ.ವಿಶ್ವನಾಥ್ ಅವರ ಧರ್ಮ ಪತ್ನಿ ಸುವರ್ಣ ರವರ ಶಿವಗಣಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಯಾವುದನ್ನು ಊಟ ಮಾಡಬೇಕೋ ಅದನ್ನು ಮಾಡದೆ ಬೇರೆ ಏನನ್ನೋ ಊಟ ಮಾಡುತ್ತಿರುವುದರಿಂದ ಇಲ್ಲದ ರೋಗಗಳಿಗೆ ಗುರಿಯಾಗುತ್ತಿದ್ದಾನೆ. ಯಾವುದೇ ಸಂಪತ್ತನ್ನು ಗಳಿಸಿದರು ನಿಮ್ಮ ಹಿಂದೆ ಬರುವುದಿಲ್ಲ,ನಿಮ್ಮ ಪತ್ನಿಯಾಗಲಿ ಮಕ್ಕಳಗಾಲಿ ಯಾರು ಜೊತೆಗೆ ಬರುವುದಿಲ್ಲ ಎಂದು ವಿವರಿಸಿದರು.

ಕಡೂರು ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಧರ್ಮ ಸಂಸ್ಕೃತಿಯಿಂದ ದೂರ ಹೋಗುತ್ತಿದ್ದಾರೆ. ಸಾವು ಎಂಬುದರ ನಿಜವಾದ ಬೆಲೆ ಸಿಗುವುದು.ಇಸ್ಲಾಂ ಮತ್ತು ಕ್ರಿಶ್ಚಿಯನ್ನರಲ್ಲಿ ಮಾತ್ರ ಪ್ರತಿಯೊಬ್ಬರಲ್ಲಿ ಸಂಸ್ಕಾರ ಮೂಡಬೇಕಿದೆ ಎಂದು ನುಡಿದರು.

ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿ ಮಾತನಾಡಿ, ಹೆಣ್ಣು ಮನೆತನಕ್ಕೆ ಅಷ್ಟೆ ಸೀಮಿತವಾಗದೆ ಸಮಾಜಕ್ಕೂ ಕಣ್ಣಾಗಬೇಕು.ವ್ಯಕ್ತಿಯ ಬದುಕು ಎಷ್ಟು ದಿನ ಎಂಬುದಕ್ಕಿಂತ ಬದುಕಿದ್ದಾಗ ಬಾಳಿದ ರೀತಿ ಗಳಿಸುವ ಪ್ರೀತಿ, ಉಳಿಸಿದ ನೀತಿ ಇದೇ ಸಾರ್ಥಕ ಬದುಕಿನ ಲಕ್ಷಣಗಳು ಎಂದರು. 

ಕಾರ್ಯಕ್ರಮದಲ್ಲಿ ಲಿಕೆರೆ ದೊಡ್ಢ ಮಠದ ಶ್ರೀ ವಿರೂಪಾಕ್ಷ ಲಿಂಗ ಸ್ವಾಮಿ, ಬೀರೂರು ರಂಭಾಪುರಿ ಖಾಸ ಮಠದ ರುದ್ರಮುನಿ ಸ್ವಾಮಿ ಹಾಗೂ ಕೆ.ಬಿದರೆ ಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಶಿವಮೊಗ್ಗದ ಮಾಜಿ ಶಾಸಕ ಚಂದ್ರಶೇಖರ್, ಬೆಳ್ಳಿ ಪ್ರಕಾಶ್, ಡಾ.ಬಸವಣ್ಣಯ್ಯ, ಸಿ.ಎನ್.ಶೇಖರಪ್ಪ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News