×
Ad

ಸುಪ್ರೀಂ ಕೋರ್ಟ್ ನ ಆದೇಶ ಖಂಡಿಸಿ ವಕೀಲರ ಪ್ರತಿಭಟನೆ

Update: 2017-09-20 23:04 IST

ಮದ್ದೂರು, ಸೆ.20: ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದಂತೆ ಜಿಲ್ಲಾ ನ್ಯಾಯಾಲಯ, ತತ್ಸಮಾನದ ನ್ಯಾಯಲಯಗಳ ಹುದ್ದೆಗಳಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಿಸಿ ನೇಮಕ ಮಾಡಲು ಕೇಂದ್ರೀಯ ಮಂಡಳಿಗೆ ಜವಾಬ್ದಾರಿ ನೀಡಿರುವುದನ್ನು ಖಂಡಿಸಿ ಬುಧವಾರ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಸಿ.ಅಶೋಕ್ ಕುಮಾರ್ ಮಾತಾನಾಡಿ, ನೇಮಕಾತಿ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸಿದರೆ ಕಕ್ಷಿದಾರರಿಗೆ, ವಕೀಲರಿಗೆ ಭಾಷೆ ತೊಂದರೆಯಾಗುತ್ತದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯವು ಆದೇಶ ಮಾಡಿರುವುದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಎನ್. ಪುಟ್ಟಸ್ವಾಮಿ, ಉಪಾಧ್ಯಕ್ಷ ಎಂ.ಸುರೇಶ್, ಶಿವಣ್ಣ, ಶೇಖರ್, ಎಂ.ಎಂ. ಪ್ರಶಾಂತ್, ಪ್ರಸನ್ನ, ಉಮೇಶ್, ಚಲುವರಾಜು, ಎ.ಎಸ್. ಶಿವಣ್ಣ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News