ಗಿರಿಜನ ನಿರಾಶ್ರಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2017-09-20 17:48 GMT

ಮಡಿಕೇರಿ, ಸೆ.20: ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕುಶಾಲನಗರ ಬಳಿಯ ಬಸವನಹಳ್ಳಿ ಮತ್ತು ಬ್ಯಾಡಗೋಟ್ಟ ಗಿರಿಜನ ನಿರಾಶ್ರಿತ ಪ್ರದೇಶಗಳಿಗೆ ಬುಧುವಾರ ಭೇಟಿ ನೀಡಿ ಸ್ಥಲ ಪರಿಶೀಲನೆ ನಡೆಸಿ ನಿವಾಸಿಗಳಿಂದ ಮಾಹಿತಿ ಪಡೆದರು. 

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ನಿರಾಶ್ರಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಬಡಾವಣೆ ರಚನೆ, ಚರಂಡಿ ಹಾಗೂ ರಸ್ತೆ ನಿರ್ಮಾಣ, ಅಂಗನವಾಡಿ ಕೆಂದ್ರ ಇನ್ನಿತರ ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು.

ನಿರಾಶ್ರಿತರಿಗೆ 3.90 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳುವಂತೆ ನಿರಾಶ್ರಿತರಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಸಮಗ್ರ ಗಿರಿಜನ ಇಲಾಖೆಯ ಯೋಜನಾಧಿಕಾರಿಯಾದ ಬಿ.ಎನ್.ಪ್ರಕಾಶ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಪ್ರಮುಖರಾದ ಎಸ್.ಎನ್.ರಾಜಾರಾವ್, ತಹಶೀಲ್ದಾರ ಮಹೇಶ್, ಸ್ಥಳೀಯರು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News