ಅತ್ತಿಗೆರೆ ಗ್ರಾಮ ಪಂಚಾಯತ್ ಬಯಲು ಬಹಿರ್ದೆಸೆ ಮುಕ್ತ: ಅಶ್ವತಿ

Update: 2017-09-20 18:12 GMT

ದಾವಣಗೆರೆ, ಸೆ.20: ಅತ್ತಿಗೆರೆ ಗ್ರಾಮ ಪಂಚಾಯತ್ ಬಯಲು ಬಹಿರ್ದೆಸೆ ಮುಕ್ತ ಪಂಚಾಯತ್ ಆಗಿರುವುದು ತುಂಬಾ ಸಂತಸ ತಂದಿದೆ ಹಾಗೂ ಇದರ ಹಿಂದೆ ಎಲ್ಲರ ಪರಿಶ್ರಮವಿದೆ ಎಂದು ಜಿಪಂ ಸಿಇಒ ಎಸ್. ಅಶ್ವತಿ ಹೇಳಿದರು.

ತಾಲೂಕಿನ ಅತ್ತಿಗೆರೆ ಗ್ರಾಪಂ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದೇ ರೀತಿ ಜಿಲ್ಲೆಯ ಎಲ್ಲಾ ಗ್ರಾಪಂಗಳು ಬಯಲು ಮುಕ್ತ ಬಹಿರ್ದೆಸೆ ಆಗಬೇಕು ಎಂದು ಅವರು ಆಶಿಸಿದರು.

ಅತ್ತಿಗೆರೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 5 ಗ್ರಾಮಗಳಿದ್ದು ಒಟ್ಟು 1647 ಕುಟುಂಬಗಳ ಪೈಕಿ 2017 ಎಪ್ರೀಲ್ 1ಕ್ಕೆ 1332 ಕುಟುಂಬಗಳು ಶೌಚಾಲಯ ಹೊಂದಿದ್ದು, ಉಳಿದ 283 ಶೌಚಾಲಯಗಳನ್ನು ನಿರ್ಮಾಣ ಮಾಡಲು ರೂಪರೇಷೆ ಹಾಕಿಕೊಂಡು ಈ ದಿನ ಅತ್ತಿಗೆರೆ ಗ್ರಾಮಪಂಚಾಯತ್ ನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಪಂಚಾಯತ್ ಯನ್ನಾಗಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಪಂಚಾಯತಿ ಅಧ್ಯಕ್ಷ ಎಂ.ಎನ್. ಲಿಂಗರಾಜ್ ವಹಿಸಿದ್ದರು. ಪ್ರಾರ್ಥನೆಯನ್ನು ಶಾಲಾ ಮಕ್ಕಳು ನೆರವೇರಿಸಿದರು. ಎನ್ ವಿವೇಕಾನಂದ ಪಂಚಾಯತಿ ಅಭಿವೃದ್ದಿ ಅಧಿಕಾರಿಯವರು ಸ್ವಾಗತ ಮಾಡಿದರು ಸಮಾರಂಭದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಅಶ್ವತಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಪಂ ಉಪಕಾರ್ಯದರ್ಶಿಗಳಾದ ಜಿ.ಎಸ್. ಷಡಾಕ್ಷರಪ್ಪ, ತಾಪಂತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಲ್.ಎಸ್. ಪ್ರಭುದೇವ್, ಜಿಪಂ ಸದಸ್ಯರಾದ ಶೈಲಜಾ ಬಸವರಾಜ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ. ಅಶೋಕ್, ತಾಪಂ ಸದಸ್ಯರಾದ ಹೆಚ್.ಆರ್ ಮರುಳಸಿದ್ದಪ್ಪ, ಜಿಪಂ ಸಹಾಯಕ ಯೋಜನಾಧಿಕಾರಿ ಶಶೀಧರ್, ತಾಪಂ ಸಹಾಯಕ ನಿರ್ಧೆಶಕ ಎ.ಜೆ. ಆನಂದ್, ಉಪಾಧ್ಯಕ್ಷರಾದ ಕೊಲ್ಲಾರಮ್ಮ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News