ಚಾಮರಾಜನಗರ: ಪೌರಕಾರ್ಮಿಕರಿಗೆ ಶಾಸಕ ಪುಟ್ಟರಂಗಶೆಟ್ಟಿ ಹಕ್ಕುಪತ್ರ ವಿತರಣೆ

Update: 2017-09-20 18:20 GMT

ಚಾಮರಾಜನಗರ, ಸೆ.20: ಚಾಮರಾಜನಗರದ ಸಿಡಿಎಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 120 ಕ್ಕೂ ಹೆಚ್ಚು  ಪೌರ ಕಾರ್ಮಿಕರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ನಿವೇಶನದ ಹಕ್ಕುಪತ್ರ ವಿತರಿಸಿದರು.

ಬಳಕ  ಮಾತನಾಡಿದ ಅವರು, ಪೌರಕಾರ್ಮಿಕರು ಪಟ್ಟಣ ಪ್ರದೇಶದಲ್ಲಿ ಸ್ವಚ್ಛತೆಗಾಗಿ ಬಹಳ ಶ್ರಮಿಸಿ ತಮ್ಮ ಜೀವನದ ಹಂಗನ್ನೂ ತೊರೆದು ಕಷ್ಟದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಹಾಗಾಗಿ ನಗರದ ಯಡಪುರದ ಬಳಿ 90, ಸೋಮವಾರಪೇಟೆಯಲ್ಲಿ 22 ಮತ್ತು ರಾಮಸಮುದ್ರದಲ್ಲಿ 8 ನಿವೇಶನಗಳ ಸ್ಥಳ ಗುರುತಿಸಿ  ಖಾಯಂ ಹಾಗೂ ಹೊರಗುತ್ತಿಗೆದಾರರು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಕೂಡ ಶೂರನ್ನ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.

ರಾಷ್ಟ್ರೀಯ ಯೋಜನೆಯಡಿ  ಸರ್ಕಾರದಿಂದ ಖಾಯಂ ಪೌರ ಕಾರ್ಮಿಕರಿಗೆ 7 ಲಕ್ಷ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ 3.30 ಲಕ್ಷ ರೂ. ನೀಡಿ, ಆದಷ್ಟು ಬೇಗ ಮನೆ ನಿರ್ಮಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಆ ಸ್ಥಳದಲ್ಲಿ 2 ಬೋರ್ವೆಲ್  ಕೊರೆಸಲಾಗಿದೆ ಇದರ ಜೊತೆಗೆ ಮೂಲಭೂತ ಸೌಕರ್ಯಗಳನ್ನೂ ಕೂಡ ಆದಷ್ಟು ಬೇಗ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ರಾಜಣ್ಣ, ಮಲ್ಲೇಶ್ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News