ಸಂಕಷ್ಟದ ಮಹಿಳೆಗೆ ಮನೆ ನಿರ್ಮಿಸಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

Update: 2017-09-21 13:47 GMT

ಮೈಸೂರು, ಸೆ.21: ದಾಸೋಹದ ಬಾಗಿಲಲ್ಲಿ ಕೂತಿದ್ದ ಮಹಿಳೆಯೋರ್ವಳು ತನ್ನ ಸಂಕಷ್ಟವನ್ನು ಮುಂಖ್ಯಮಂತ್ರಿಯೊಂದಿಗೆ ಅಳಲು ತೋಡಿಕೊಂಡ ಘಟನೆ ದಸರಾ ಉದ್ಘಾಟನೆ ಮುಗಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಸೋಹ ಭವನಕ್ಕೆ ತೆರಳಿ ಉಪಹಾರ ಸೇವಿಸಿ ಹೊರಗೆ ಬರುವ ವೇಳೆ ನಡೆಯಿತು.

ಸಂಕಷ್ಟಕ್ಕೀಡಾದ ಮಹಿಳೆಯು ಸಿಎಂ ಸಿದ್ದರಾಮಯ್ಯ ಆಕೆ ಬಳಿ ತೆರಲಿ ಸ್ವಾಮಿ ನನಗೆ ಎರಡೂ ಕಾಲುಗಳಿಲ್ಲ, ನನ್ನ ಮಗುವನ್ನು ಸಾಕಲು ಆಶ್ರಯವಿಲ್ಲ, ನನ್ನ ಜೀವನಕ್ಕೆ ಕಷ್ಟ ಆಗಿದೆ. ದಯಮಾಡಿ ನನಗೆ ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಡಿ.ರಂದೀಪ್ ಅವರನ್ನು ಕರೆದು ಕೂಡಲೇ ಈಕೆ ಕೇಳಿದ ಕಡೆ ಒಂದು ಮನೆ ನಿರ್ಮಿಸಿಕೊಡುವಂತೆ ಸೂಚಿಸಿದರು. ಅಲ್ಲದೆ, ತಮ್ಮ ಜೇಬಿಗೆ ಕೈಹಾಕಿ 500 ರೂ. ಆಕೆಗೆ ನೀಡಿ, ಧೈರ್ಯವಾಗಿರು, ನೀನೇನು ಹೆದರಬೇಡ, ನಿನ್ನ ಸಹಾಯಕ್ಕೆ ನಾನಿದ್ದೇನೆ, ನಮ್ಮ ಅಧಿಕಾರಿಗಳು ನಿನಗೆ ಸಹಾಯ ಮಾಡುತ್ತಾರೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News