ಭಟ್ಕಳ: ಬೈಕ್ ನಿಯಂತ್ರಣ ತಪ್ಪಿ ಮಹಿಳೆ ಕೆಳಗೆ ಬಿದ್ದು ಮೃತ್ಯು

Update: 2017-09-21 13:50 GMT

ಭಟ್ಕಳ, ಸೆ.21: ಬೈಕ್‍ ಸವಾರನ ಹಿಂಬದಿ ಕೂತಿದ್ದ ಮಹಿಳೆಯೊಬ್ಬರು ಬೈಕ್ ನಿಂದ ತಪ್ಪಿ ಕೆಳಗಡೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಾಗರ ರಸ್ತೆಯಲ್ಲಿ ನಡೆದಿದೆ. 

ಮೃತ ಮಹಿಳೆಯನ್ನು ಮುಂಡಳ್ಳಿಯ ನಿವಾಸಿ ಸೀತಾ ನಾಯ್ಕ(38) ಎಂದು ಗುರುತಿಸಲಾಗಿದೆ.

ಸೀತಾ ನಾಯ್ಕ ಅವರು ತನ್ನ ಪತಿ ಕೃಷ್ಣನಾಯ್ಕರೊಂದಿಗೆ ಹಾಡು ವಳ್ಳಿಯಿಂದ ಬೈಕ್ ನಲ್ಲಿ ಚಲಿಸುತ್ತಿದ್ದಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್‍ ನಿಂದ ಕೆಳಗಡೆ ಬಿದ್ದ ತಲೆಗೆ ಬಲವಾದ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News