ಪಶು ಆಸ್ಪತ್ರೆಗೆ ವೈದ್ಯರ ನೇಮಿಸುವಂತೆ ಜಾನುವಾರುಗಳೊಂದಿಗೆ ರೈತರ ಧರಣಿ

Update: 2017-09-21 18:00 GMT

ನಾಗಮಂಗಲ, ಸೆ.21: ತಾಲೂಕಿನ ಹೊಣಕೆರೆ ಗ್ರಾಮದ ಪಶು ಆಸ್ಪತ್ರೆಗೆ ಎರಡು ವರ್ಷಗಳಿಂದಲೂ ಪಶು ವೈದ್ಯರಿಲ್ಲದೆ ಜಾನುವಾರಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಪಶು ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಹೊಣಕೆರೆ ಹೋಬಳಿಯ ಸುತ್ತಮುತ್ತಲ ರೈತರು ಜಾನುವಾರುಗಳೊಂದಿಗೆ ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಿದರು.

ತಾಲೂಕು ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಜಾನುವಾರುಗಳೊಂದಿಗೆ ಬೆಳಗ್ಗೆ ರಸ್ತೆ ತಡೆ ನಡೆಸಿದ ರೈತರು ರಾಜ್ಯ ಸರ್ಕಾರ ಮತ್ತು ಶಾಸಕ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಹೊಣಕೆರೆ ಹೊಬಳಿಯ ಕೆಂದ್ರ ಸ್ಥಾನದಲ್ಲಿರುವ ಪಶು ಆಸ್ಪತ್ರೆಗೆ ಎರಡು ವರ್ಷದಿಂದಲೇ ವೈದರಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಇದೇ ಹೋಬಳಿಯ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಕೃಷ್ಣೇಗೌಡರಿಗೂ ಹಿಂದೆ ಹಲವು ಬಾರಿ ಮನವಿ ಮಾಡಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ.ಬರಗಾಲದಿಂದ ತತ್ತರಿಸಿರುವ ರೈತರ ಜಾನುವಾರುಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಸಮಯಕ್ಕೆ ಚಿಕಿತ್ಸೆ ಕೊಡಿಸಲಾಗದೆ ಹಲವು ದನಕರುಗಳು ಸಾವನ್ನಪ್ಪಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ತಹಶೀಲ್ದಾರ್ ಶಿವಣ್ಣ ಭೇಟಿ ನೀಡಿ ರೈತರ ಮನವಿ ಸ್ವೀಕರಿದ ಮಾತನಾಡಿದ ಅವರು, ಕೂಡಲೇ ಜಿಲ್ಲಾ ಪಶು ಇಲಾಖೆ ನಿರ್ದೇಶಕರೊಂದಿಗೆ ಚರ್ಚಿಸಿ ಶೀಘ್ರವೇ ಆಸ್ಪತ್ರೆಗೆ ಪಶು ವೈದ್ಯರ ನೇಮಿಸುವ ಭರವಸೆ ನೀಡಿದರು.

ಧರಣಿಯಲ್ಲಿ ರೈತ ಮುಖಂಡ ರವಿ, ಚಂದ್ರು ಮತ್ತಿತರರು ಭಾಗವಹಿಸದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News