ಸೆ.23ರಂದು ಉದ್ಯೋಗ ಮೇಳ: ಮಹೇಶ್

Update: 2017-09-21 18:08 GMT

ಕೊಳ್ಳೇಗಾಲ, ಸೆ.21: ಎನ್.ಮಹೇಶ್ ಜನಸೇವಾ ಕೇಂದ್ರ ಹಾಗೂ ಅಕ್ಷರ ಫೌಂಡೇಶನ್ ವತಿಯಿಂದ ಸೆ.23ರಂದು ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಬಿಎಸ್ಪಿ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗಿ ವಲಯ ಹಾಗೂ ನಿರುದ್ಯೋಗಿಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಇದರ ಪ್ರಯೋಜನವನ್ನು ಎಲ್ಲಾ ಉದ್ಯೋಕಾಂಕ್ಷಿಗಳು ಪಡೆಯಬೇಕು ಎಂದು ಮನವಿ ಮಾಡಿದರು.

ಕಳೆದ ಮೂರು ತಿಂಗಳಿನಿಂದ ಬಹುಜನ ಸಮಾಜ ಪಾರ್ಟಿಯ ವತಿಯಿಂದ ಹಮ್ಮಿಕೊಂಡಿದ್ದ ವಾಕ್ ಟು ವಾರ್ಡ್ ಹಾಗೂ ವಾಕ್ ಟು ವಿಲೇಜ್‍ನಲ್ಲಿ ಸಮೀಕ್ಷೆ ಮಾಡುವ ಸಂಧರ್ಭದಲ್ಲಿ ಕ್ಷೇತ್ರದ ಜನರಿಗೆ ಸರ್ಕಾರದ ಸೌಲಭ್ಯಗಳು ಸೀಗುವಲ್ಲಿ ಹಾಗೂ ಯುವಕ ಯುವತಿಯರಿಗೆ ಸರ್ಕಾರಿ ಉದ್ಯೋಗದ ಅವಕಾಶ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅದರಲ್ಲಿ ಸುಮಾರು 5 ಸಾವಿರ ನಿರುದ್ಯೋಗಿಗಳನ್ನು ಗುರುತಿಸಲಾಗಿದೆ ಎಂದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಿಎಡ್ ಮತ್ತು ಡಿಎಡ್ ಶಿಕ್ಷಣಾರ್ಥಿಗಳು ಹಾಗೂ ವೈದ್ಯಕೀಯ ವಿಭಾಗದಲ್ಲಿ ಗುತ್ತಿಗೆ ಆಧಾರಿತ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳುವ ಮೂಲಕ ಸಾಕಷ್ಟು ಯುವಕ ಯುವತಿಯರು ಕೆಲಸವಿಲ್ಲದೆ ಪರದಾಡುವ ಸರಿಸ್ಥಿತಿ ಉಂಟಾಗಿದೆ. ಅಂತಹ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ಮೇಳ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಜೆಎಸ್‍ಎಸ್ ಮಹಾಸಂಸ್ಥಾನದ ಕಾರ್ಯದರ್ಶಿ ಮಂಜುನಾಥ್, ವಾಟಾಳು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ, ನಳಂದ ಬುದ್ಧ ವಿಹಾರದ ಬಂತೆ ಬೋಧಿರತ್ನರವರು,  ಮುಸ್ಲಿಂ ಧರ್ಮಗುರು ಮೊಹಮ್ಮದ್ ಅಬ್ದುಲ್ಲಾ, ಕ್ರೈಸ್ತ ಧರ್ಮದ ಗುರು ರೆ.ಲಾಜರಸ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಕ್ಷರ ಫೌಂಡೇಶನ್ ಸಂಸ್ಥೆಯ ಕುಮಾರ್ ಮಾತನಾಡಿ, ಬೆಂಗಳೂರು, ಬೆಳಗಾಂ, ತುಮಕೂರು ಸೇರಿದಂತೆ ರಾಜ್ಯದ ಹಲವಾರು ಕಡೆಯಿಂದ ಸುಮಾರು 80 ಕಂಪೆನಿಗಳು ಆಗಮಿಸಲಿದೆ. ಈ ಮೇಳದಲ್ಲಿ 8, 10, ಪಿಯುಸಿ, ಡಿಗ್ರಿ ಸೇರಿದಂತೆ ಉನ್ನತ ಶಿಕ್ಷಣ ಪಡೆದಂತಹ 18 ವಯಸ್ಸಿನ 35 ವರ್ಷದ ಯುವಕ ಯುವತಿಯರ ಭಾಗವಹಿಸಬಹುದಾಗಿದೆ. ಇದರ ಪ್ರಯೋಜನವನ್ನು ಉದ್ಯೋಗಕಾಂಕ್ಷಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ನಗರಸಭೆ ಸದಸ್ಯರಾದ ರಾಮಕೃಷ್ಣ, ರಂಗಸ್ವಾಮಿ, ಮುಖಂಡರಾದ ರಾಜೇಂದ್ರ, ಜಗದೀಶ್, ಟ್‍ನ್.ಅಧ್ಯಕ್ಷ ಜಕಾವುಲ್ಲಾ,ಸ ಕಾಂತರಾಜು ಆಚಾರ್, ಸೋಮಣ್ಣ ಉಪ್ಪಾರ್, ಮುಳ್ಳೂರು ಪ್ರಭು, ಸಿದ್ದರಾಜು ಕೆಂಪನಪಾಳ್ಯ, ಮಹದೇವ, ಶಿವಮೂರ್ತಿ, ನಸೀಮ್‍ಪಾಷ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News