ಕೊಳ್ಳೇಗಾಲ: ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಆಲಹಳ್ಳಿ ಬಸವಣ್ಣ ಆಯ್ಕೆ

Update: 2017-09-21 18:21 GMT

ಕೊಳ್ಳೇಗಾಲ, ಸೆ.21: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ನೂತನ ಅಧ್ಯಕ್ಷರಾಗಿ ಆಲಹಳ್ಳಿ ಎ.ಬಿ.ಬಸವಣ್ಣರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಏಕೈಕ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಕುಂತೂರು ಕ್ಷೇತ್ರದ ಸದಸ್ಯ ಎ.ಬಿ.ಬಸವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಾಮಾಕ್ಷಮ್ಮ ಅವರು ಘೋಷಣೆ  ಮಾಡಿದರು.

ಈ ಹಿಂದೆ ಇದ್ದ ಅಧ್ಯಕ್ಷ ಸೋಮಣ್ಣ ರಾಜೀನಾಮೆ ನೀಡಿದ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಸುಮಾರು 15 ಮಂದಿ ಸದಸ್ಯರುಗಳು ಭಾಗವಹಿಸಿದರು.

ಈ ವೇಳೆ ಎಪಿಎಂಸಿ ನೂತನ ಅಧ್ಯಕ್ಷ ಬಸವಣ್ಣ ಮಾತನಾಡಿ, ರೈತರ ಪರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಹಿಂದೆ ಇದ್ದ ಅಧ್ಯಕ್ಷರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪಾಧ್ಯಕ್ಷ ಕೆಂಪಲಿಂಗ, ಸದಸ್ಯರುಗಳಾದ ಮಾದೇಗೌಡ, ಶಿವಕುಮಾರ್, ಜಯರಾಮ್, ಗೋವಿಂದರಾಜು, ರಾಜಪ್ಪ, ಬಾಲನ್, ಆರ್.ಟಿ. ಸ್ವಾಮಿ, ಇಂದ್ರೇಶ್, ರಂಗಶೇಟ್ಟಿ, ಸೋಮಶೇಖರ್, ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಎಂಎಫ್ ಸದಸ್ಯ ತೋಟೇಶ್, ರಾಜ್ಯ ರಸ್ತೆ ನಿಗಮ ಸದಸ್ಯ ರಾಜೇಂದ್ರ ಮೋಳೆ, ಜಿಪಂ ಸದಸ್ಯೆ ಮರುಗದ ಮಣಿ, ಮಹದೇಶ್ವರ ಬೆಟ್ಟ ಪ್ರಾಧಿಕಾರದ ಸದಸ್ಯ ಕೊಪ್ಪಾಳಿ ಮಹದೇವನಾಯಕ, ಚಿಕ್ಕಣಸ್ವಾಮಿ, ಟಗರಪುರ ಗ್ರಾಪಂ ಅಧ್ಯಕ್ಷ ಲಿಂಗರಾಜು, ಎಪಿಎಂಸಿ ಕಾರ್ಯದರ್ಶಿ ಪುಷ್ಪ ಹಾಗೂ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News