ಕೊಳ್ಳೇಗಾಲ: ಪಟ್ಟಣದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿಗೆ ತಹಶೀಲ್ದಾರ್ ಸೂಚನೆ

Update: 2017-09-21 18:26 GMT

ಕೊಳ್ಳೇಗಾಲ, ಸೆ.21: ನಗರವು ಸೂಕ್ಷ್ಮ ಪ್ರದೇಶವಾಗಿದ್ದು, ಸುಮಾರು 20 ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ತಹಶೀಲ್ದಾರ್ ಕಾಮಾಕ್ಷಮ್ಮ ಸೂಚಿಸಿದ್ದಾರೆ.

ಪಟ್ಟಣದ ತಾಲೂಕು ಆಡಳಿತ ವತಿಯಿಂದ ನಡೆದ ಪರಿಶಿಷ್ಟ ಜನಾಂಗ ಹಾಗೂ ಪರಿಶಿಷ್ಷ ಪಂಗಡ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಸಭೆಯಲ್ಲಿ ನಗರದಲ್ಲಿ ಸಿಸಿ ಕ್ಯಾಮೆರಾ ಆಳವಡಿಸಲು ಸೂಚಿಸಿದ್ದರೂ ನಗರಸಭೆ ಅಧಿಕಾರಿಗಳು ಇನ್ನೂ ಕ್ರಮ ಜರಗಿಸಿದ ಹಿನ್ನೆಲೆ ಕೂಡಲೇ ಕ್ಯಾಮರಾ ಅಳವಡಿಕೆಗಾಗಿ ಸೂಚಿಸಿದರು.

ನಗರಸಭೆ ಅಧಿಕಾರಿ ಪರಶಿವ ಮಾತನಾಡಿ, ಪಟ್ಟಣದಲ್ಲಿ 3 ಕ್ಯಾಮರಾ ಅಳವಡಿಸಲು ನಗರಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದಾಗ, ಪರಿಶಿಷ್ಟ ಜನಾಂಗ ಹಾಗೂ ಪಂಗಡದ ಬಡಾವಣೆಗಳಿಗೆ ಸಿಸಿ ಕ್ಯಾಮಾರವನ್ನು ಅಳವಡಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ಯಾಮೆರಾಗಳನ್ನು ಆಳವಡಿಸಿ ಎಂದು ಸಭೆಯಲ್ಲಿ ನೇರಿದಿದ್ದ ಎಸ್ಸಿ,ಎಸ್ಟಿಸಮಿತಿಯ ಸದಸ್ಯರು ಹೇಳಿದರು.

ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ನೋಟಿಸ್ ನೀಡದೆ ಎನ್‌ಎಚ್ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ದಬ್ಬಾಳಿಕೆಯಲ್ಲಿ ಏಕಾ-ಏಕಿ ಹೊಸ ಅಣಗಳ್ಳಿ ಬಡಾವಣೆಯ ಮರಿಸಿದ್ದಯ್ಯ ಮನೆಯನ್ನು ಕೆಡವಿದರಿಂದ ಬಾಣಂತಿಯರಾದ ಹೆಣ್ಣು ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಬೀದಿಯಲ್ಲಿ ಜೀವನ ನಡೆಸುವ ಪರಿಸ್ಥಿತಿ ಇದೆ. ಇದರ ಬಗ್ಗೆ ಪರಿಗಣಿಸಿ ದಲಿತ ಕುಟುಂಬಕ್ಕೆ ಸರಿಯಾದ ಪರಿಹಾರ ಕೊಡಿಸಿ ಎಂದು ಸಭೆಯಲ್ಲಿ ಹೇಳಿದರು.

ಇದಕ್ಕೆ ನಟರಾಜು ಮಾಳಿಗೆ, ಶೇಖರಬುದ್ದ ಹಾಗೂ ರಾಜಶೇಖರ್ ಮೂರ್ತಿ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯಲ್ಲಿ ಬಲಿಷ್ಠರನ್ನು ರಕ್ಷಣೆ ಮಾಡಲು ಹೋಗಿ ದಲಿತರು ಹಾಗೂ ಬಡವರಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ಸಭೆಯ ಅಧ್ಯಕ್ಷರ ಗಮನಹರಿಸಬೇಕೆಂದು ಆಗ್ರಹಿಸಿದರು.

ಇದಕ್ಕೆ ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ, ಮುಂದಿನ ಸಭೆಯೊಳಗೆ ಎನ್‌ಎಚ್ ಅಧಿಕಾರಿಗಳ ಜೊತೆ ಚರ್ಚಿಸಿ ಹೊಸ ಅಣಗಳ್ಳಿ ಮರಿಸಿದ್ದಯ್ಯ ಅವರ ಮನೆ ಕೆಡಿವಿದಕ್ಕೆ ಸರಿಯಾದ ಮಾಹಿತಿ ನೀಡಲು ಸೂಚಿಸುತ್ತೇನೆ ಹಾಗೂ ಆ ಕುಟುಂಬಕ್ಕೆ ಪರಿಹಾರ ನೀಡುವಂತೆ ತಿಳಿಸುವುದಾಗಿ ಹೇಳುತ್ತೆನೆ ಎಂದರು.

ಸರಕಾರದ ಆದೇಶದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ವರ್ಗವಾರು ಸಶ್ಮಾನ ನಿರ್ಮಾಣ ಬದಲು ಎಲ್ಲಾ ಸಮುದಾಯಕ್ಕೆ ಒಂದೇ ಸಶ್ಮಾನ ನಿರ್ಮಾಣ ಮಾಡಬೇಕಾಗಿದೆ. ಅದರಲ್ಲಿ ಸುಮಾರು 85 ಗ್ರಾಮಗಳಲ್ಲಿ ಸಶ್ಮಾನ ನಿರ್ಮಾಣವಾಗಿದ್ದು, ಸುಮಾರು 146 ಗ್ರಾಮಗಳಲ್ಲಿ ಸಶ್ಮಾನ ನಿರ್ಮಾಣವಾಗಬೇಕಿದೆ. ಆದ್ದರಿಂದ ಸಶ್ಮಾನ ನಿರ್ಮಾಣ ಮಾಡುವುದಕ್ಕೆ ಜಾಗ ನೀಡಲು ಮುಂದಾಗುವವರಿಗೆ ಉಪ ನೋಂದಣಾಧಿಕಾರಿ ಇಲಾಖೆಯ ನೀಡುವ ಬೆಲೆಗಿಂತ ಮೂರು ಪಟ್ಟು ಹೆಚ್ಚಾಗಿ ನೀಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಈ ಸಂಧಭರ್ದಲ್ಲಿ ತಾಪಂ ಅಧ್ಯಕ್ಷ ರಾಜು ಮಾತನಾಡಿದರು. ಸಮಾಜಕಲ್ಯಾಣಧಿಕಾರಿ ಮಂಜುಳಾ, ಜಿಪಂ ಎಇಇ ಶ್ರೀಧರ್, ಇಂಜಿನಿಯರ್ ಸಿದ್ದಪ್ಪಾಜಿ ಗೌಡ, ಹನುಮಂತ ಶೆಟ್ಟಿ, ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿ ಗಂಗಾಧರ್, ತೋಟಾಗಾರಿಕೆ ಇಳಾಖೆಯ ಶಶೀಧರ್, ಕಬಿನಿ ಇಂಜಿನಿಯರ್ ರಾಮಕೃಷ್ಣ, ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ಸಮಿತಿಯ ಸದಸ್ಯ ಜಡೇಸ್ವಾಮಿ, ಮುಖಂಡರಾದ ಪುಟ್ಟಬುದ್ದಿ, ವರದರಾಜು, ಚಿಕ್ಕಲಿಂಗಯ್ಯ, ಸೋಮು, ಮಹದೇವು, ಚಂದ್ರು ಹಗೂ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News