×
Ad

ಪುರಸಭೆಗೆ ಕಲ್ಲು ತೂರಾಟ ಪ್ರಕರಣ: 11 ಮಂದಿಗೆ ಜಾಮೀನು

Update: 2017-09-22 18:33 IST

ಭಟ್ಕಳ, ಸೆ.22: ಸೆ.14 ರಂದು ಪುರಸಭೆ ಎದುರು ನಡೆದ ಪ್ರತಿಭಟನೆಯಲ್ಲಿ ಪುರಸಭೆ ಕಟ್ಟಡದ ಮೇಲೆ ಕಲ್ಲು ತೂರಾಟ ಆರೋಪದಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ, 13 ಮಂದಿ ಪೈಕಿ 11 ಮಂದಿಗೆ ಭಟ್ಕಳ ಜೆಎಂಎಫ್ ಸಿ ನ್ಯಾಯಾಲಯ ಗುರುವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಆದೇಶ ನೀಡಿದೆ.

ಕಾರವಾರದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಈಶ್ವರದುರ್ಗಪ್ಪನಾಯ್ಕ, ಮಾಸ್ತಪ್ಪ ದುರ್ಗಪ್ಪ ನಾಯ್ಕ, ಶಂಕರ ವಿ.ನಾಯ್ಕ, ರಾಜೇಶ ನಾಗಪ್ಪ ನಾಯ್ಕ, ದಯಾನಂದ ಮಾದೇವ ನಾಯ್ಕ, ಪುಂಡಲೀಕ ಸುಕ್ರಯ್ಯ ನಾಯ್ಕ, ಜನಾರ್ದನ ವೆಂಕಟರಮಣ ನಾಯ್ಕ, ರಾಜು ಸುಕ್ರ ನಾಯ್ಕ ಹಾಗೂ ಗಣಪತಿ ನಾರಾಯಣ ನಾಯ್ಕ, ಮಂಜುನಾಥದುರ್ಗಪ್ಪ ನಾಯ್ಕ, ಆನಂದ ನಾಯ್ಕ ಎಂಬವರಿಗೆ ಜಾಮೀನು ದೊರೆತಿದೆ.

ಇದೇ ಆರೋಪಡಿಯಲ್ಲಿ ಬಂಧಿತರಾಗಿದ್ದ ಬಿಜೆಪಿ ಮುಖಂಡರಾದ ಗೋವಿಂದಜಟ್ಟಪ್ಪ ನಾಯ್ಕ ಹಾಗೂ ಆಸರಕೇರಿ ಕೃಷ್ಣಾ ನಾಗಪ್ಪ ನಾಯ್ಕ ರಿಗೆ ಜಾಮೀನು ದೊರೆತಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News