×
Ad

ಆಸ್ತಿ ಪ್ರಕರಣ: ಅಣ್ಣನಿಂದ ತಂಗಿಯ ಕೊಲೆಗೆ ಯತ್ನ

Update: 2017-09-22 20:19 IST

ತುಮಕೂರು, ಸೆ.22: ಅಣ್ಣನೋರ್ವ ತನ್ನ ತಂಗಿಯ ಕತ್ತು ಸೀಳಿ ಹತ್ಯೆ ಗೈಯಲು ಯತ್ನಿಸಿರುವ ಘಟನೆ ಎನ್ಇಪಿಎಸ್  ಪೊಲೀಸ್ ಠಾಣೆಯ ಹಿಂಭಾಗ ನಡೆದಿದೆ.

ಅಂಜಲಿ (23) ಹಲ್ಲೆಗೊಳಗಾಗಿರುವ ವಿವಾಹಿತ ಯುವತಿ ಎಂದು ಗುರುತಿಸಲಾಗಿದೆ. 

ಆಕೆಯ ಅಣ್ಣ  ದೇವರಾಜು (24)   ಕತ್ತು  ಕೊಯ್ದಿರುವ ಆರೋಪಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಬಿಡದಿ ಮೂಲದ ಮಂಜುನಾಥ್ ಎಂಬವರನ್ನು ಮದುವೆಯಾಗಿದ್ದ ಅಂಜಲಿ ತವರು ಮನೆಗೆ ಬಂದಿದ್ದರು, ಶುಕ್ರವಾರ ಆಸ್ತಿ ವಿಚಾರವಾಗಿ ಅಣ್ಣ ತಂಗಿ ನಡುವೆ ಮನೆಯಲ್ಲಿ ಜಗಳ ಮಾಡಿಕೊಂಡು ಬಳಿಕ ಅಂಜಲಿ ಅಣ್ಣನ ವಿರುದ್ಧ ದೂರು ನೀಡಲು ಹೊಸ ಬಡಾವಣೆ ಠಾಣೆಗೆ ಬಂದಿದ್ದರು. ಮಹಿಳಾ ಪೋಲಿಸ್ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಹೊಸ ಬಡಾವಣೆ ಪೋಲಿಸರು ಅಂಜಲಿಗೆ ತಿಳಿಸಿದ್ದಾರೆ. ಆದರೆ  ಮಹಿಳಾ ಪೋಲಿಸ್ ಠಾಣೆಗೆ ಹೋಗದ ಅಂಜಲಿ ಠಾಣೆಯ ಆವರಣದಲ್ಲೆ ಕೂತಿದ್ದರು. ಜತೆಯಲ್ಲಿ ಬಂದಿದ್ದ ಅಣ್ಣ ದೇವರಾಜು ಅಂಜಲಿಯನ್ನ ಹೊರಗೆ ಕರೆದುಕೊಂಡು ಹೋಗಿ   ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ ಎನ್ನಲಾಗಿದೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ದೇವರಾಜನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿ, ಹಲ್ಲೆಗೊಳಗಾದ ಅಂಜಲಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.

ದೇವರಾಜುವನ್ನು ವಶಕ್ಕೆ ಪಡೆದಿರುವ ಹೊಸ ಬಡಾವಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಎನ್ ಇ ಪಿ ಎಸ್ ಫೋಲಿಸ್ ಠಾಣೆಗೆ ಅಸ್ತಿ ವಿಚಾರಕ್ಕೆ ಅಂಜಲಿ ದೂರು ನೀಡಲು ಬಂದಾಗ ಬೆಳಗ್ಗೆ ಮಹಿಳಾ ಫೋಲಿಸ್ ಠಾಣೆಗೆ ಕಳುಹಿಸದೆ ಠಾಣೆಯಲ್ಲಿಯೇ ರಾಜಿ ಸಂಧಾನ ಮಾಡುವ ಇತ್ಯರ್ಥ ಮಾಡೋಣ ಎಂದು ಸತಾಯಿಸಿದ ಪರಿಣಾಮವೇ ಈ ಘಟನೆ ನಡೆದಿದೆಎಂದು ಅಂಜಲಿಯ ಫೋಷಕರು ಫೋಲಿಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News