×
Ad

ಮಹಿಳೆಯರು ಆರ್ಥಿಕ ಸಬಲರಾಗಲಿ: ಡಾ.ಮೋಟಮ್ಮ

Update: 2017-09-22 22:48 IST

ಮೂಡಿಗೆರೆ, ಸೆ.22: ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಮುಂದಾಗುವ ಎಲ್ಲಾ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಚೈತನ್ಯ ಪರಿಶಿಷ್ಟ ಜಾತಿಯ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ಎಂಎಲ್‍ಸಿ ಡಾ.ಮೋಟಮ್ಮ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದ ಜೇಸಿ ಭವನದಲ್ಲಿ ಚೈತನ್ಯ ಪರಿಶಿಷ್ಟ ಜಾತಿಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಹಾಗೂ ಪಟ್ಟಣದಲ್ಲಿರುವ ಬಹುತೇಕ ಮಹಿಳೆಯರು ಎಲ್ಲಾ ರಂಗಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ಸಂಪಾದನೆ ಹಾಗೂ ಸಮಾಜದಲ್ಲಿ ಉತ್ತಮ ಸಾತ್ವಿಕ ಜೀವನ ನಡೆಸುವುದರಲ್ಲಿ ಯಶಸ್ವಿ ಕಾಣುತ್ತಿದ್ದಾರೆ. ಅಂತಹ ಜೀವನ ನಡೆಸಲು ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ ಎಂದು ನುಡಿದರು.

ಚೈತನ್ಯ ಪರಿಶಿಷ್ಟ ಜಾತಿಯ ಮಹಿಳಾ ಪತ್ತಿನ ಸಹಕಾರ ಸಂಘ ಪ್ರಾರಂಭಗೊಂಡು ಎರಡನೆ ವರ್ಷಕ್ಕೆ ಕಾಲಿಟ್ಟಿದೆ. 11.ಲಕ್ಷ ರೂ. ಬಂಡವಾಳದಿಂದ ಪ್ರಾರಂಭಗೊಂಡ ಸಂಘವು, ಇಂದು 69.ಲಕ್ಷ ರೂ. ವ್ಯವಹಾರ ವಹಿವಾಟು ನಡೆಸಿದೆ. ಸಂಘದಲ್ಲಿ 1416 ಮಹಿಳೆಯರು ಸದಸ್ಯರಿದ್ದು, ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು, ಸಂಘದ ಬೆಳವಣಿಗೆ ಹಾಗೂ ಆರ್ಥಿಕ ಪ್ರಗತಿಗೆ ಎಲ್ಲಾ ಮಹಿಳೆಯರು ಶ್ರಮಿಸಬೇಕು ಎಂದು ತಿಳಿಸಿದರು.

ಈ ವೇಳೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ, ನಿವೃತ್ತ ಸಿಡಿಒ ಸಿ.ಸಿ.ರುದ್ರೇಗೌಡ, ಸಂಪನ್ಮೂಲ ವ್ಯಕ್ತಿ ಎನ್.ಜೆ.ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ  ಹೆಚ್.ಎಂ.ಜಯಲಕ್ಷ್ಮಿ, ನಿರ್ದೇಶಕರಾದ ಸರಸ್ವತಿ ಸಾಗರ್, ಎಂ.ಹೆಚ್. ಸೀತಮ್ಮ, ಹೆಚ್.ಕೆ.ನೀಲಾ ಅನಂತ್, ಲಕ್ಷ್ಮೀ ರಾಮಯ್ಯ, ಜಾನಕಿ ರಮೇಶ್, ಸರೋಜ ಚಂದ್ರು, ರತ್ನ ರಮೇಶ್, ಸಿ.ಎ.ಮಂಜುಳ, ನೀಲಮ್ಮ ಬ್ರಹ್ಮದೇವ್, ರುಕ್ಮಿಣಿ ದೇವರಾಜು, ಜಯಂತಿ ರಮೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News