ಆತ್ಮಹತ್ಯಾ ಯತ್ನ: ಪ್ರಕರಣ ದಾಖಲು
ಚಿಕ್ಕಮಗಳೂರು, ಸೆ.22: ಭದ್ರ ಮೇಲ್ದಂಡೆ ಯೋಜನೆಯಲ್ಲಿ ಜಮೀನಿನ ವಿಚಾರವಾಗಿ ಬೇಸತ್ತು ಆತ್ಮಹತ್ಯೆ ಯತ್ನಿಸಿರುವ ಘಟನೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದಿದೆ.
ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಶಿವಣ್ಣ ತರಿಕೇರೆ ತಾಲೂಕು ಗಾಳಿಹಳ್ಳಿ ಗ್ರಾಮದ ರೈತ ಶಿವಣ್ಣ(45) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭದ್ರ ಮೇಲ್ದಂಡೆ ಯೋಜನೆಯಲ್ಲಿ ಗದ್ದೆಯ ರಸ್ತೆ ಕಳೆದುಕೊಂಡಿದ್ದ ರೈತ ಶಿವಣ್ಣ ಜಮೀನಿನ ವಿಚಾರವಾಗಿ ಬೇಸತ್ತು ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ನ್ಯಾಯಾ ಕೊಡಿಸುವಂತೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ತರೀಕೆರೆ ಠಾಣೆಗೆ ಪತ್ರ ಬಂದಿತ್ತು.
ಈ ಹಿನ್ನೆಲೆಯಲ್ಲಿ ತರೀಕೆರೆ ಪೊಲೀಸ್ ಠಾಣೆಗೆ ರೈತ ಶಿವಣ್ಣ ಹಾಗೂ ಭದ್ರ ಮೇಲ್ದಂಡೆ ಅಧಿಕಾರಿಗಳನ್ನು ಪೊಲೀಸರು ಕರೆಸಿದ್ದರು. ಪೊಲೀಸರಿಂದ ನ್ಯಾಯ ಸಿಗುವುದಿಲ್ಲ ಎಂದುಕೊಂಡ ಶಿವಣ್ಣ ಠಾಣೆಯಲ್ಲಿಯೆ ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರೈತ ಶಿವಣ್ಣ ಈ ಹಿಂದೆ ಅನೇಕ ಸಲ ಭದ್ರಾ ಮೇಲ್ದಂಡೆ ಅಧಿಕಾರಿಗಳ ವಿರುದ್ದ ಹೋರಾಟ ನಡೆಸಿದ್ದರು. ಇಂದು ವಿಷ ಸೇವಿಸಿ ಅಸ್ವಸ್ಥತಗೊಂಡ ರೈತ ಶಿವಣ್ಣ ಶಿವಮೊಗ್ಗದ ಮೆಗ್ಗನ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.