×
Ad

ಗುಂಡ್ಲುಪೇಟೆ: ರಸ್ತೆ ಅಡ್ಡಗಟ್ಟಿ ಕಾರು, ನಗದು ದರೋಡೆ

Update: 2017-09-24 17:41 IST

ಗುಂಡ್ಲುಪೇಟೆ, ಸೆ.24: ಕಾರೊಂದನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು, ನಗದು, ಮೊಬೈಲ್ ದರೋಡೆ ಮಾಡಿದ ಘಟನೆ ಪಟ್ಟಣದಿಂದ ಕೇರಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ನಡೆದಿದೆ.

ಕೇರಳದ ತಾಮ್ರಚೇರಿಯ ನಿವಾಸಿ ಮೂಲದ ಅಜ್ಮಲ್ ಅಹ್ಮದ್ ಎಂಬವರು ತಮ್ಮ ಕಾರಿನಲ್ಲಿ ರಾವಿವಾರ ರಾತ್ರಿ 1.45ಗಂಟೆ ವೇಳೆ ಮದ್ದೂರಿನತ್ತ ತೆರಳುತ್ತಿರುವಾಗ ಕಾವೇರಿ ಕಂಫರ್ಟ್ ಹೊಟೇಲ್ ಬಳಿ ಸುಮಾರು 5 ಕಾರುಗಳಲ್ಲಿ ಬಂದ  25 ದುಷ್ಕರ್ಮಿಗಳು ಅಡ್ಡಗಟ್ಟಿ ಅಜ್ಮಲ್ ಅಹ್ಮದ್ ಬಳಿಯಿದ್ದ 38 ಸಾವಿರ ರೂ. ನಗದು, ಎರಡು ಮೊಬೈಲ್ ಹಾಗೂ ಕಾರನ್ನು ದರೋಡೆ ಗೂದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹತ್ತಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಚೆಕ್ ಪೋಸ್ಟ್ ಸಮೀಪದ ಚನ್ನಮಲ್ಲೀಪುರದ ಬಳಿಯಲ್ಲಿ ದರೋಡೆ ಗೈದ ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಅಪರಾಧಿಗಳನ್ನು ಪತ್ತೆಹಚ್ಚಲು ಬೆರಳಚ್ಚು ಸಂಗ್ರಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಡಿವೈಎಸ್ಪಿ ಎಸ್.ಇ.ಗಂಗಾಧರ ಸ್ವಾಮಿ, ಸರ್ಕಲ್ ಇನ್ ಸ್ಪೆಪೆಕ್ಟರ್ ಕೆ.ವಿ.ಕೃಷ್ಣಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News