×
Ad

ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ಕೋಟಿ ರೂ. ಮಂಜೂರು: ಶಾಸಕ ದತ್ತ

Update: 2017-09-24 22:25 IST

ಕಡೂರು, ಸೆ.24: ರಾಷ್ಟ್ರೀಯ ಮಾನವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.

ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ರಾಷ್ಟ್ರೀಯ ಸೇವಾ ಯೋಜನೆಯ ಯುವ ರೆಡ್ ಕ್ರಾಸ್ ಮತ್ತು ಸ್ಕೌಟ್ಸ್ ಘಟಕಗಳ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ  ಯೋಜನೆಯ ಅನುದಾನದಲ್ಲಿ ಇದೀಗ ಕಾಲೇಜಿನ 20 ಕೋಠಡಿಗಳಿಗೆ  ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಳಾಗಿದ್ದು, ಸಿಸಿ ಕ್ಯಾಮೆರಾಗಳ  ಅಳವಡಿಸಲಾಗಿದೆ. ಪ್ರತೀ ಉಪನ್ಯಾಸಕರಿಗೆ ಲ್ಯಾಪ್ ಟಾಪ್ ಕೂಡ ವಿತರಿಸಲಾಗುತ್ತಿದೆ ಎಂದರು.

ಕಾಲೇಜಿನಲ್ಲಿ ಅಧುನಿಕ ಗ್ರಂಥಾಲಯ ಆರಂಭವಾಗಲಿದೆ. ಇದರಲ್ಲಿ ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಮೂಲೆಯಿಂದ ಬೇಕಾದ ಸಂಗತಿಗಳನ್ನು ಪಡೆಯಬಲ್ಲ ಇ-ಲೈಬ್ರರಿ ಕೂಡ ಆರಂಭವಾಗಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ವಿದ್ಯಾಥಿಘಗಳು  ಖಾಸಗಿ ಕಾಲೇಜುಗಳ ಶಿಕ್ಷಣಕ್ಕಿಂತ ಕಡಿಮೆ ಇಲ್ಲದಂತಹ ಆಧುನಿಕ ಶಿಕ್ಷಣ ಪಡೆಯಬೇಕು ಎಂಬುದು ಒಬ್ಬ ಶಿಕ್ಷಕನಾಗಿ ನನ್ನ ಆಸೆಯಾಗಿದೆ. ವಿದ್ಯಾರ್ಥಿಗಳು ಇದರೆ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಕರೆ ನೀಡಿದರು.

ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಮಾತನಾಡಿ, ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಉತ್ತಮ ಸಮಾಜದ ನಿರ್ಮಾಣಕ್ಕೆ ಬಳಸಬೇಕು. ಹಾಗೆಯೇ ದೇಶಕ್ಕೆ ಅನುಕೂಲವಾಗುವ ರೀತಿಯಲಿ ತಮ್ಮವರನವನ್ನು ವಿನಿಯೋಗಿಸಬೇಕು. ಆ ಮೂಲಕ ಸಮಾಜದ ಹಾಗೂ ತಾಯ್ನಾಡಿನ ಋಣ ತೀರಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಎ.ಜಿ.ಶ್ರೀಧರಬಾಬು, ಚಲನಚಿತ್ರ ನಟಿ, ಶ್ರೀಮತಿ ಆಶಾಲತ, ತಾಪಂ ಅಧ್ಯಕ್ಷ ರೇಣುಕಾ ಉಮೇಶ್, ಪುರಸಭೆ ಉಪಾಧ್ಯಕ್ಷ ರಾಜೇಶ್, ಅಭಿವೃದ್ದಿ ಸಮಿತಿ ಸದಸ್ಯರಾದ ಎನ್.ಎಂ.ನೀಲಪ್ಪ,  ಆರ್.ಎಂ.ಬಸವರಾಜ್, ಅಬ್ದುಲ್ ಮಜೀದ್, ಸಾಂಸ್ಕೃತಿಕ ಸಂಚಾಲಕ ಎಂ.ಮಹೇಶ್,  ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕ ದೊರೇಶ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಿ.ಟಿ. ಶಿವಕುಮಾರ್,  ಎನ್.ಸೋಮಶೇಖರ್. ಎಸ್.ಸತೀಶ್, ಎಸ್.ಯೋಗೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News