×
Ad

ಕೊಳ್ಳೇಗಾಲ: ಉದ್ಯೋಗ ಮೇಳಕ್ಕೆ ಚಾಲನೆ

Update: 2017-09-24 23:20 IST

ಕೊಳ್ಳೇಗಾಲ, ಸೆ.24: ಕೇಂದ್ರ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಆದರೆ ಮೂರು ವರ್ಷದಲ್ಲಿ ಶೇ.60ಷ್ಟು ಉದ್ಯೋಗ ಪ್ರಮಾಣ ಕ್ಷೀಣಿಸಿದೆ. ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದರೆ ನಮ್ಮ ಉದ್ಯೋಗ ನಾವೇ ಸೃಷ್ಠಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಮೈಸೂರು ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ಅವರು ಹೇಳಿದರು.

ಪಟ್ಟಣದ ಎಂಜಿಎಸ್‍ವಿ ಕಾಲೇಜು ಮೈದಾನದಲ್ಲಿ ಅಕ್ಷರ ಪೌಂಡೇಶನ್ ಹಾಗೂ ಎನ್.ಮಹೇಶ್ ಜನಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿಧರರಿಗೆ ಅನುಗುಣವಾಗಿ ದೇಶದಲ್ಲಿ ಉದ್ಯೋಗ ಸೃಷ್ಠಿಯಾಗುತ್ತಿಲ್ಲ ಮೈಸುರು ನಗರ ಪ್ರದೇಶದಲ್ಲಿ ತಿಂಗಳಿಗೆ ಎರಡು ಇಲ್ಲವೇ ಮೂರು ಉದ್ಯೋಗ ಮೇಳಗಳು ನಡೆಯುತ್ತವೆ ಅಲ್ಲಿ ಮೇಳ ಆಯೋಜನೆ ಸುಲಭ ಆದರೆ ಗ್ರಾಮಾಂತರ ಪ್ರದೇಶಗಳನ್ನೆ ಒಳಗೊಂಡ ಕೊಳ್ಳೇಗಾಲ ತಾಲೂಕಿನಲ್ಲಿ ಉದ್ಯೋಗ ಮೇಳ ಆಯೋಜನೆ ಸುಲಭದ ಮಾತಲ್ಲ, ಅದರಲ್ಲೂ ಅಟ್ಟಿ, ಆತಂಕಗಳ ನಡುವೆ ಇಲ್ಲಿ 80 ಪ್ರತಿಷ್ಠಿತ ಕಂಪೆನಿಗಳನ್ನು ಕರೆತಂದು ಮಹೇಶ್ ಜನಸೇವಾ ಕೇಂದ್ರ ವತಿಯಿಂದ ಅವರ ಅಭಿಮಾನಿಗಳು ಇಲ್ಲಿ ಸಂಘಟನೆಸಿರುವುದು ಉತ್ತಮ ಸಂಗತಿ ಎಂದು ತಿಳಿಸಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಉದ್ಯೋಗ ಮೇಳಕ್ಕೆ ಕಳೆದ ಒಂದು ವಾರಗಳಿಂದ ವಿಘ್ನ ತಂದಿಟ್ಟು ಫ್ಲೆಕ್ಸ್ ಹಾಗೂ ಬ್ಯಾನರ್ ಕಿತ್ತು ಹಾಕಿ ಹಲವು ರೀತಿಯ ಅಟ್ಟಿಯುಂಟು ಮಾಡಿದ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ ಎಂದರು.

ಇಂದಿನ ಉದ್ಯೋಗ ಮೇಳದಲ್ಲಿ 3 ಸಾವಿರ ಮಂದಿ ಪಾಲ್ಗೊಂಡಿದ್ದಾರೆ 80ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿವೆ. ಯಾವ ದೇಶ ಉದ್ಯೋಗ ನೀಡುವ ಕೆಲಸ ಆಗುವುದಿಲ್ಲ ಅಂತಹ ದೇಶ ಅಭಿವೃದ್ಧಿಯಲ್ಲಿ ವಿಫಲವಾಗಲಿದೆ ಎಂದು ವ್ಯಾಖ್ಯಾನಿಸಿದ ಅವರು, ದೇಶದ್ಯಾಂತ ಹೆದ್ದಾರಿ, ಮೇಟ್ರೋ, ತೂಗು ಸೇತುವೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯ ನಡೆದಿದೆ ನಡೆಯುತ್ತಲೆ ಇದೆ. ಆದರೆ ನಿರುದ್ಯೋಗ ಸಮಸ್ಯೆಗೆ ಮಾತ್ರ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ವಿಷಾದಿಸಿದರು. 

ಕಾರ್ಯಕ್ರವದಲ್ಲಿ ವಾಟಾಳು ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನರಸೀಪು ಬುದ್ಧ ವಿಹಾರದ ಬಂತೇ ಭೋಧಿರತ್ನ, ಮುಸ್ಲಿಂ ಧರ್ಮಗುರು ಕೆ.ಮಹಮ್ಮದ್ ಅಬ್ದುಲ್ಲಾ, ಕ್ರೈಸ್ತ ಧರ್ಮಗುರು ರೆ.ಫಾದರ್ ಲಾಜರೆಸ್, ಭಗೀರಥಾ ಸೇನಾ ಸಮಿತಿಯ ಸೋಮಣ್ಣ ಉಪ್ಪಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ, ರಸ್ತೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮುತ್ತುರಾಜ್, ಶಿವರಾಜ್‍ಕುಮಾರ್ ಅಭಿಮಾನಿ ಸಂಘದ ಮಹದೇವಪ್ರಭು, ರಕ್ಷಣಾ ವೇದಿಕೆ ಅಧ್ಯಕ್ಷ ಮಹಮದ್ ಮತೀನ್, ಯುವಶಕ್ತಿ ವೇದಿಕೆ ಅಧ್ಯಕ್ಷ ಸಿದ್ದಪ್ಪಾಜಿ, ನಾಗರಿಕ ಹಿತಾರಕ್ಷಣಾ ಸಮಿತಿಯ ನಟರಾಜುಮಾಳಿಗೆ, ಹಣ್ಣು ತರಕಾರಿ ವ್ಯಾಪರಿ ಸಂಘದ ಅಧ್ಯಕ್ಷ ಸಮೀಉಲ್ಲಾ, ಶಂಕರ್, ಕಾಂತರಾಜ್, ನಗರಸಭೆ ಸದಸ್ಯರಾದ ರಂಗಸ್ವಾಮಿ, ರಾಮಕೃಷ್ಣ, ಆರ್.ಪಿ ನಂಜುಂಡಸ್ವಾಮಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮುಖಂಡರಾದ ಎಂ.ಪಂಚಾಕ್ಷರಿ, ಬೂದಿತಿಟ್ಟು ರಾಜೇಂದ್ರ, ಶಿವನಂಜಪ್ಪ, ಅರಕಲವಾಡಿ ನಾಗೇಂದ್ರ, ಬಾಗಲಿ ರೇವನ್ಣ, ಅಂಬಳೆ ಮಹದೇವ, ಸಿದ್ದೇಶಬಾಬು, ಶಂಕನಪು ಜಗದೀಶ್, ಶಿವಮೂರ್ತಿ, ರಮೇಶ್ ಹಾಗೂ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News