ಪಾರದರ್ಶಕ ವ್ಯವಹಾರ ನಡೆಸಿದರೆ ಸಂಘದ ಅಭಿವೃದ್ಧಿ ಸಾಧ್ಯ: ಶಾಸಕ ಬಿ.ಬಿ.ನಿಂಗಯ್ಯ

Update: 2017-09-25 17:18 GMT

ಮೂಡಿಗೆರೆ, ಸೆ.24: ಸಹಕಾರ ಸಂಘದ ವ್ಯವಹಾರವನ್ನು ಪ್ರಾಮಾಣಿಕವಾಗಿ ಮಾಡಿದರೆ ಸಂಘದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಲೆನಾಡು ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಮಲೆನಾಡು ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಸಂಘದ ಅಭಿವೃದ್ಧಿಗೆ ಸದಸ್ಯರೇ ಮೂಲ ಬಂಡವಾಳವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸುವ ಕೆಲಸ ಆಗಬೇಕು. ಅಲ್ಲದೆ ಸಂಘದಿಂದ ಸಾಲ ಪಡೆಯುವವರು ಮರುಪಾವತಿ ಮಾಡುವ ಸಂಕಲ್ಪದೊಂದಿಗೆ ಸಕಾಲದಲ್ಲಿ ಹಿಂತಿರುಗಿಸಿದಾಗ ಸಂಘದ ಏಳಿಗೆ ಸಾಧ್ಯವಾಗುತ್ತದೆ ಎಂದರು.

ತನ್ನ ಅಧ್ಯಕ್ಷತೆಯಲ್ಲಿ ಸಂಘಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್‍ನಿಂದ ಆರ್ಥಿಕ ನೆರವು ಕೋರಲು ಆಡಳಿತ ಮಂಡಳಿ ಸಹಯೋಗದಿಂದ ಆರ್ಥಿಕ ಸಂಪನ್ಮೂಲದ ಕ್ರೂಡೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದ ಅವರು, ಒಂದುವರೆ ಕೋಟಿ ರೂ.ವೆಚ್ಚದಲ್ಲಿ ಸಂಘದ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಿದ್ದು, ಅದಕ್ಕಾಗಿ ತನ್ನ ಶಾಸಕರ ನಿಧಿಯಿಂದ 80.ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿ  ಸಿ.ಸಿ.ರುದ್ರೇಗೌಡ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಎಸ್.ಕೃಷ್ಣ, ಉಪಾಧ್ಯಕ್ಷ ಯು.ಬಿ.ಮಂಜಯ್ಯ, ನಿರ್ದೇಶಕರಾದ ವೆಂಕಟಯ್ಯ, ಎಲ್.ಬಿ.ರಮೇಶ್, ಎನ್.ಆರ್.ನಾಗರತ್ನ, ಹೇಮಾವತಿ, ಹೆಚ್.ಬಿ.ಮಂಜುನಾಥ್, ಗೋಪಾಲ, ಬಿ.ಕೆ,ಶೇಷಪ್ಪ, ಹೆಚ್.ಆರ್.ಚಂದ್ರು, ಹೆಸಗಲ್ ಗಿರೀಶ್, ಯು.ಆರ್.ರುದ್ರಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News