ಕ್ರಿಶ್ಚಿಯನ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2017-09-25 17:26 GMT

ಚಿಕ್ಕಮಗಳೂರು, ಸೆ.25: ಕ್ರಿಶ್ಚಿಯನ್ ವಿವಿಧೋದ್ದೇಶ ಸಹಕಾರ ಸಂಘದ 17.68 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.13.50 ಲಾಭಾಂಶವನ್ನು ಶೇರುದಾರರಿಗೆ ವಿತರಿಸಲಾಗುವುದೆಂದು ಸಂಘದ  ಅಧ್ಯಕ್ಷ ಎಸ್.ಎಫ್.ಲೂಯೀಸ್ ಹೇಳಿದರು.

ನಗರದ ಜೂಬಿಲಿ ಹಾಲ್‍ನಲ್ಲಿ ಏರ್ಪಡಿಸಿದ್ದ ಸಂಘದ ಸರ್ವಸದಸ್ಯರ 8ನೆ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು. 2017ರ ಮಾರ್ಚ್‍ಗೆ 555 ಜನ ಸದಸ್ಯರಿದ್ದು ಒಟ್ಟು ಶೇರು ಬಂಡವಾಳ 31.18 ಲಕ್ಷ ರೂ. ಇದ್ದು, ಸದಸ್ಯರಿಗೆ ವಿವಿಧ ಯೋಜನೆಯಡಿ 5 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ನಮ್ಮ ಸಹಕಾರ ಸಂಘಕ್ಕೆ ಈ ವರ್ಷ “ಏ” ಗ್ರೇಡ್ ದೊರಕಿದ್ದು, ಸಂಘಕ್ಕೆ ಸ್ವಂತ ನಿವೇಶನ ಹೂಡುವ ಬಗ್ಗೆ ಈಗಾಗಲೇ ಆದೇಶ ಮಂಡಳಿ ನಿರ್ಧಾರ ತೆಗೆದುಕೊಂಡಿದ್ದು ಸದಸ್ಯರ ಬೆಂಬಲ ಬೇಕು ಎಂದಾಗ ಸದಸ್ಯರು ಸರ್ವಾನುಮತ ಒಪ್ಪಿಗೆ ನೀಡಿದರು.

ಸಭೆಯಲ್ಲಿ ನಿರ್ದೇಶಕರಾದ ವಿಕ್ಟರ್ ಜಾರ್ಜ್, ವಿ.ಟಿ.ಥಾಮಸ್, ಪಿ.ಜೆ. ಪ್ರಾಸಿಸ್, ಗೇಸಿಪೌಲ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News