ಬಣಕಲ್‍: ಹೋಬಳಿ ಮಟ್ಟದ ಜೆಡಿಎಸ್ ಸಮಾವೇಶ

Update: 2017-09-25 17:32 GMT

ಬಣಕಲ್, ಸೆ.25: ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ಹಾಗೂ ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಿದೆ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡುತ್ತಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

ಸೋಮವಾರ ಬಣಕಲ್ ಸಮುದಾಯ ಭವನದಲ್ಲಿ ನಡೆದ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರ 20 ತಿಂಗಳ ಅಧಿಕಾರಾವಧಿಯಲ್ಲಿ ಜನತೆಗೆ ವೃದಾಪ್ಯವೇತನ, ವಿದ್ಯಾರ್ಥಿಗಳಿಗೆ ಸೈಕಲ್ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನು ತಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ನ್ನು ಸೋಲಿಸಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ ಕುಮಾರ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ನ್ನು ಅಧಿಕಾರಕ್ಕೆ ತರುವುದು ಮತ್ತು ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೆ ನಮ್ಮ ಗುರಿಯಾಗಿದೆ. ಮಲೆನಾಡಿನ ಕೆಲಭಾಗದಲ್ಲಿ ದೈತ್ಯಶಂಕುಹುಳು ಕಾಣಿಸಿಕೊಂಡು ರೈತರು ಆತಂಕಗೊಂಡಿದ್ದಾರೆ. ಮಲೆನಾಡಿನ ಭಾಗದ ಸಮಸ್ಯೆಗಳನ್ನು ಬಗೆಹರಿಸುವ ಬದಲು ಬಾಬಾಬುಡಾನ್‍ಗಿರಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜು, ಹಿರಿಯ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ ಕಳಸ, ಜೆಡಿಎಸ್ ಬಣಕಲ್ ಹೋಬಳಿ ಅಧ್ಯಕ್ಷ ಮಹೇಶ್ ಬೆಳಗೋಡು, ಕ್ಷೇತ್ರಸಮಿತಿ ಅಧ್ಯಕ್ಷ ಸುರೇಶ್, ತಾಲೂಕು ಅಧ್ಯಕ್ಷ ಲಕ್ಷ್ಮಣ್‍ಗೌಡ, ಕ್ಷೇತ್ರ ಸಮಿತಿ ಮಹಿಳಾ ಅಧ್ಯಕ್ಷೆ ಸುಮನಾಗೇಶ್, ತಾಪಂ ಸದಸ್ಯೆ ವೇದಾಲಕ್ಷ್ಮಣ್, ಕ್ಷೇತ್ರಸಮಿತಿ ಯುವಜನತಾದಳ ಕಾರ್ಯಾದ್ಯಕ್ಷ ಆದರ್ಶ್ ಬಾಳೂರು, ಯುವಜನತಾದಳ ತಾಲ್ಲೂಕು ಉಪಾಧ್ಯಕ್ಷ ಚಿದನ್, ತಾಲೂಕು ಪ್ರಧಾನ ಕಾರ್ಯದರ್ಶಿ ಇಮ್ರಾನ್, ಅಲ್ಪ ಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಜಕ್ರಿಯಾ ಜಾಕೀರ್, ಅರ್ಜುನ್, ಸಂಪತ್‍ ಪಟ್ಟದೂರು, ಅಜೀಜ್, ಮಂಜು ಬೆಟ್ಟಗೆರೆ, ಉಬೈದ್ ಅಭಿಗುಡ್ಡಟ್ಟಿ, ನೂತನ್ ಮತ್ತಿತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News