ಖಾಯಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಶಾಸಕ ರಫೀಕ್ ಅಹ್ಮದ್ ಸೂಚನೆ

Update: 2017-09-25 17:38 GMT

ತುಮಕೂರು, ಸೆ.25: ಮಹಾನಗರ ಪಾಲಿಕೆ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ಕರ್ನಾಟಕ ಭೂ-ಕಂದಾಯ ಅಧಿನಿಯಮ ಕಲಂ 94ಸಿಸಿಯಡಿ ಹಕ್ಕು ಪತ್ರಗಳನ್ನು ವಿತರಿಸುವಂತೆ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ತಶೀಲ್ದಾರ್ ರಂಗೇಗೌಡ ಅವರಿಗೆ ಸೂಚಿಸಿದ್ದಾರೆ.

ನಗರದ ದೇವರಾಯಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಕಲಂ 94 ಸಿಸಿಯಡಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ತುಮಕೂರು ಮಹಾನಗರದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರೂ ಅವರಿಗೆ ಆ ಮನೆಯ ಮೇಲೆ ಯಾವುದೇ ಹಕ್ಕುಗಳಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಇಂತಹವರಿಗೆ ಹಕ್ಕು ಪತ್ರ ನೀಡುವ ನಿರ್ಧಾರ ತೆಗೆದುಕೊಂಡ ನಂತರ  ನಗರದಲ್ಲಿ 200 ಕ್ಕೂ ಹೆಚ್ಚು ಮಂದಿಗೆ ಹಕ್ಕು ಪತ್ರಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬಡವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಇಲಾಖೆಯ ಮೂಲಕ ಅನುಷ್ಠಾನಗೊಳಿಸಿದ್ದಾರೆ.ಇದರಿಂದ ದೀನ ದಲಿತರಿಗೆ, ಬಡವರಿಗೆ ಅನುಕೂಲವಾಗಿದೆ.ಕಳೆದ 30 ವರ್ಷಗಳಿಂದ ನಗರದ ಬಡ್ಡಿಹಳ್ಳಿ ಕೆರೆಯಲ್ಲಿ 28 ಹಾಗೂ ಬಂಡೆಪಾಳ್ಯದಲ್ಲಿ 30 ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶವನ್ನು ಸರ್ವೇ ಮಾಡಿ ಇವರಿಗೆ ಹಕ್ಕುಪತ್ರಗಳನ್ನು ನೀಡಲು ಅವಕಾಶವಿದ್ದರೆ ಆದಷ್ಟು ಬೇಗ ಹಕ್ಕು ಪತ್ರ ನೀಡಬೇಕುಎಂದ ಅವರು, ತುಮಕೂರು ನಗರದ ಪ್ರತಿ ವಾರ್ಡಿನಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿದ್ದು,ಇವರನ್ನು ಗುರುತಿಸಿ ಹಕ್ಕು ಪತ್ರಗಳನ್ನು ನೀಡಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕೆಂದು ನಿರ್ದೇಶನ ನೀಡಿದರು. 

ಈ ವೇಳೆ  ತುಮಕೂರು ಪಾಲಿಕೆ ವತಿಯಿಂದ 57 ಮಂದಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್‍ಗಳನ್ನು ಹಾಗೂ ಕಲಂ 94ಸಿಸಿಯಡಿ 67 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಮೇಯರ್ ರವಿಕುಮಾರ್, ಟೂಡಾ ಸದಸ್ಯ ಆಟೋ ರಾಜು, ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಜಿ.ಎಚ್. ಲೋಕೇಶ್, ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News