×
Ad

ರಾಮ ದೇವರು ಎಂದು ವಾಲ್ಮೀಕಿ ಎಲ್ಲಿಯೂ ಹೇಳಿಲ್ಲ: ಸಾಹಿತಿ ಪ್ರೊ.ಕೆ.ಎಸ್.ಭಗವಾನ್

Update: 2017-09-26 17:36 IST

ಮೈಸೂರು, ಸೆ.26: "ರಾಮ ದೇವರು ಎಂದು ವಾಲ್ಮೀಕಿ ಎಲ್ಲಿಯೂ ಹೇಳಿಲ್ಲ. ರಾಮ ದೇವರಲ್ಲ, ಆತ ನಮ್ಮ ನಿಮ್ಮ ಹಾಗೆ ಒಬ್ಬ ಮನುಷ್ಯ. ವಾಲ್ಮೀಕಿ ರಾಮಾಯಣದ ಅಂಶಗಳನ್ನು ಬಹಳ ಎಚ್ಚರಿಕೆಯಿಂದ ಓದಿ ಇಂದಿನ ಯುವ ಸಮಾಜ ಅರ್ಥೈಸಿಕೊಳ್ಳಬೇಕಿದೆ" ಎಂದು ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ನಗರದ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿರುವ ದಸರಾ ಕವಿಗೋಷ್ಠಿಯ ಮೂರನೆ ದಿನವಾದ ಮಂಗಳವಾರ ವಿಶಿಷ್ಟ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಅಯೋಧ್ಯೆಯನ್ನು 11 ಸಾವಿರ ವರ್ಷಗಳವರೆಗೆ ಆಳಿದ ಎಂದು ಹೇಳುತ್ತಾರೆ. ಅದು ಶುದ್ಧ ಸುಳ್ಳು. ಈತ ಚಾತುರ್ವರ್ಣದ ಪರವಾಗಿದ್ದ. ಬ್ರಾಹ್ಮಣರ ಸೇವೆ ಮಾಡುತ್ತಿದ್ದ. ಹಾಗಾಗಿ ಇವನು ಹೆಚ್ಚು ಪ್ರಚಾರ ಪಡೆದ ಎಂದು ತಿಳಿಸಿದರು.

ರಾಮ ತನ್ನ ಆಡಳಿತಾವಧಿಯಲ್ಲಿ ಎರಡು ತಪ್ಪುಗಳನ್ನು ಎಸಗಿದ್ದ. ಒಂದು ಸೀತೆ ಗರ್ಭಿಣಿಯಾಗಿದ್ದ ಸಮಯದಲ್ಲಿ ಆತ ಅವಳನ್ನು ಕಾಡಿಗೆ ಕಳುಹಿಸಿದ್ದು, ಮತ್ತೊಂದು ಶೂದ್ರ ಶಂಬೂಕ ಸಂಸ್ಕೃತ ಕಲಿಯುತ್ತಿದ್ದಾನೆ ಎಂದು ತಿಳಿದು ಆತನ ತಲೆಯನ್ನು ಕತ್ತರಿಸಿದ್ದ. ಈ ಎರಡು ತಪ್ಪುಗಳನ್ನು ರಾಮ ಎಸಗಿದ್ದಾನೆ ಎಂದರು.

ರಾಮ ದೇವರಾಗಿದ್ದರೆ ಸೀತೆಯನ್ನು ಅಪಹರಿಸಿದ ರಾವಣನ ಬಗ್ಗೆ ಮಾಹಿತಿ ಇರಲಿಲ್ಲವೇ. ಅಲ್ಲದೆ, ರಾಮನು ರಾವಣನನ್ನು ಒಂದೇ ಕ್ಷಣದಲ್ಲಿ  ಇಲ್ಲವಾಗಿಸಬಹುದಿತ್ತು ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News