×
Ad

ಭಾರೀ ಮಳೆಗೆ ಟಿಪ್ಪು ಕಾಲದ ಕೋಟೆ ಕುಸಿತ

Update: 2017-09-26 19:50 IST

ಮಂಡ್ಯ, ಸೆ.26: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಶ್ರೀರಂಗಪಟ್ಟಣದ ಟಿಪ್ಪು ಕಾಲದ ಕೋಟೆ ಸೋಮವಾರ ತಡರಾತ್ರಿ ಕುಸಿದಿದ್ದು, ಮೈಸೂರು ಮಹರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಸೆಂದಿಲ್‍ಕೋಟೆಯೂ ನೆಲಕಚ್ಚಿದೆ. 

ಈ ಕೋಟೆ ಪುರಸಭೆ ಒಡೆತನದಲ್ಲಿ ಇದ್ದು,  ಅದಕ್ಕೆ ಹೊಂದಿಕೊಂಡಂತೆ ಇದೆ. ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕೋಟೆ ಕುಸಿದಿದೆ. ಒಂದು ವರ್ಷದ  ಹಿಂದೆ ಇದೇ ಕೋಟೆ ಮಳೆಗೆ ಕುಸಿದಿತ್ತು. ಆಗ ಪುರಸಭೆ ಕೋಟೆಯ ದುರಸ್ತಿ ಮಾಡಿತ್ತು. ಅದಾಗಿ ಕೇವಲ ಒಂದು ವರ್ಷಕ್ಕೆ ಮತ್ತೆ ಕುಸಿತ ಕಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆ ಗೋಡೆ ಕುಸಿತ: ಮಳೆಗೆ ಪಟ್ಟಣದ ರಂಗನಾಥ ನಗರದಲ್ಲಿ ಉರಗ ಪ್ರೇಮಿ ನಾರಾಯಣ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಜಖಂಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News