ಕೊಲೆ ಯತ್ನ ಆರೋಪ: ಆರೋಪಿಯ ಬಂಧನ
ಬಣಕಲ್, ಸೆ.27: ಮಹಿಳೆಯು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಆರೀಫ್ ಎಂಬವರು ಕಾರಿನಲ್ಲಿ ಹಿಂಬದಿಯಿಂದ ಬಂದುಢಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಬಣಕಲ್ ವಾಸಿ ನ್ಯಾನ್ಸಿ ಡಿಸೋಜ ಎಂಬವರು ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೆ.15 ರಂದು ಬೆಳಗ್ಗೆ ಅತ್ತಿಗೆರೆ ಸಮೀಪ ನ್ಯಾನ್ಸಿ ಡಿಸೋಜ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಆರೀಫ್ ತನ್ನ ಓಮಿನಿ ಕಾರಿನಿಂದ ಢಿಕ್ಕಿ ಹೊಡೆದು ಅಪಘಾತ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಬಣಕಲ್‍ನಲ್ಲಿರುವ ಹೂವಿನ ಅಂಗಡಿ ಬಳಿ ಬಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಆರೀಫ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೀಫ್ ಪತ್ನಿಯಿಂದ ಪ್ರತಿದೂರು: ನ್ಯಾನ್ಸಿ ಡಿಸೋಜ ಮತ್ತು ನನ್ನ ಪತಿ ಆರೀಫ್ ಒಟ್ಟಾಗಿ ಹೂವಿನ ಅಂಗಡಿ ನಡೆಸುತ್ತಿದ್ದು, ಇತ್ತೀಚೆಗೆ ವ್ಯಾಪಾರದಲ್ಲಿ ವೈಮನಸ್ಯ ಬಂದು ಇಬ್ಬರು ಬೇರೆ ಬೇರೆ ಅಂಗಡಿ ಮಾಡಿದ್ದಾರೆ. ಆರೀಫ್ ಅವರ ಹೂವಿನ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದು, ಇದರಿಂದ ಅಸಮಾಧಾನಗೊಂಡು ನ್ಯಾನ್ಸಿ ಡಿಸೋಜ ನನ್ನ ಪತಿಯ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೀಫ್ ಪತ್ನಿ ಆಯಿಷ ಬಣಕಲ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.