ಸಾಲದ ಭಾದೆ: ರೈತ ಆತ್ಮಹತ್ಯೆ
Update: 2017-09-27 17:23 IST
ಚಿಕ್ಕಮಗಳೂರು, ಸೆ.27: ರೈತನೋರ್ವ ಸಾಲದ ಭಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹ್ಯೆ ಮಾಡಿಕೊಂಡಿರುವ ಘಟನೆ ಕಳಸಾಪುರ ಎಂಬಲ್ಲಿ ನಡೆದಿದೆ.
ಮೃತ ರೈತನನ್ನು ಕಳಸಾಪುರ ಗ್ರಾಮದ ಕೆ.ಸಿ.ಜಯಶಂಕರ್(43) ಎಂದು ಗುರುತಿಸಲಾಗಿದೆ.
ಜಯಶಂಕರ್ ಅವರು ಕಳಸಾಪುರದ ಸ.ನಂ.21ರಲ್ಲಿ 1.50 ಎಕರೆ ಅಡಿಕೆ ತೋಟವನ್ನು ಹೊಂಡಿದ್ದರು. ತಮ್ಮ ಜಮೀನು ಅಭಿವೃದ್ಧಿಗೆ 2.50 ಲಕ್ಷ ರೂ. ಸಾಲವನ್ನು ಕಳಸಾಪುರ ಕೆನರಾಬ್ಯಾಂಕಿನಿಂದ ಪಡೆದಿದ್ದು, ಬೋರ್ ವೆಲ್ ಕೊರೆಸಿದ್ದರೂ ನೀರು ಬಾರದ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.